ಗಂಡನ ಹಣದಾಹಕ್ಕೆ ಬಲಿಯಾದ ಸ್ಟಾಫ್​ ನರ್ಸ್​: ಗುರುವಾರ ರಾತ್ರಿ ನಡೆಯಿತು ಭೀಕರ ದುರಂತ!

KLB Nurse
Published on

ಕಲಬುರಗಿ: ಗಂಡನ ಕಿರುಕುಳ ಸಹಿಸಲಾಗದೇ ಸ್ಟಾಫ್​ ನರ್ಸ್​ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಶಿವಾಜಿನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಇಂದಿರಾ (38) ಮೃತ ಸ್ಟಾಫ್​ ನರ್ಸ್​. ಸೇಡಂ ತಾಲ್ಲೂಕಿನ ಆಯುಷ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ತಡರಾತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದಿರಾ, ರಾಯಚೂರು ಮೂಲದ ಸಂಜೀವ್ ರೆಡ್ಡಿ ಎಂಬುವರನ್ನು 2002ರಲ್ಲಿ ಮದುವೆ ಆಗಿದ್ದರು. ಸಿವಿಲ್ ಕಾಂಟ್ರ್ಯಾಕ್ಟರ್ ಆಗಿರುವ ಸಂಜೀವ್ ರೆಡ್ಡಿ, ಹಣಕ್ಕಾಗಿ ನಿರಂತರವಾಗಿ ಇಂದಿರಾಗೆ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಶಿವಾಜಿನಗರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net