24 ಗಂಟೆಯಲ್ಲಿ 17 ಜನ ಅಂದರ್​: ಕಲಬುರಗಿಯಲ್ಲಿ ಲಾಕ್​ಡೌನ್ ಬಿಗಿ

Kalaburagi Circle 18 MAR 20
Published on

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಇನ್ನೂ ಇಬ್ಬರು ಬಲಿಯಾದ ಕಾರಣ, ಕರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಲಾಕ್​ಡೌನ್ ಅನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಸಾಮುದಾಯಿಕವಾಗಿ ಸೋಂಕು ಹರಡದಂತೆ ತಡೆಯುವುದಕ್ಕಾಗಿ ಕೆಲವು ಏರಿಯಾಗಳನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ. ಇನ್ನು, ಜಿಲ್ಲಾದ್ಯಂತ ಸೆಕ್ಟರ್​ ಮ್ಯಾಜಿಸ್ಟ್ರೇಟ್ ರನ್ನು ನೇಮಕ ಮಾಡಿರುವ ಜಿಲ್ಲಾಧಿಕಾರಿ ಶರತ್ ಬಿ. ಸೆಕ್ಷನ್ 144 ಮತ್ತು ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶಿಸಿದ್ದಾರೆ.

ನಗರ ಸೇರಿ ಹೋಬಳಿ ಮಟ್ಟದಲ್ಲಿ ಒಟ್ಟು ೫೧ ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳು ನೇಮಕವಾಗಿದ್ದು, ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಸೇರಿದಂತೆ , ಧಾರ್ಮಿಕ ಸಭೆ , ಮುದುವೆ , ಮುಂಜಿ , ಉರೂಸ್ , ಸಂತೆ , ಜಾತ್ರೆ , ಮಧ್ಯ ಮಾರಾಟ ಬಂದ್ ಮಾಡಲಾಗಿದೆ. ಅದನ್ನು ಜಿಲ್ಲೆಯಾದ್ಯಂತ ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈ ರೀತಿ ಜಿಲ್ಲಾಡಳಿತ ತೆಗೆದುಕೊಂಡಂತಹ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಆಗ್ತಿರೋದ್ರ ಬಗ್ಗೆ ಗಮನಿಸಿ ಪ್ರತಿ ದಿನ ಸಂಜೆ ವರದಿ ಸಲ್ಲಿಸಲು ಅವರಿಗೆ ಸೂಚನೆಯನ್ನು ಜಿಲ್ಲಾಧಿಕಾರಿ ಕೊಟ್ಟಿದ್ದಾರೆ.

ಕಲಬುರಗಿ ನಗರದಲ್ಲಿ ಅನಗತ್ಯವಾಗಿ ಓಡಾಡುವರನ್ನು ಹಿಡಿದು ಜೈಲಿಗೆ ಕಳುಹಿಸುತ್ತಿರುವ ಪೊಲೀಸರು, ಕಳೆದ ಒಂದೇ ದಿನ 17 ಜನರಿಗೆ ಜೈಲು ಭಾಗ್ಯ ತೋರಿಸಿದ್ದಾರೆ. ನಗರದ ರೋಜಾ ಮತ್ತು ಚೌಕ್ ಠಾಣೆ ಪೊಲೀಸರ ಕಾರ್ಯಾಚರಣೆ ಇದಾಗಿದ್ದು, ಬಂಧಿತರದಲ್ಲಿ ಲಾಕ್​ ಡೌನ್ ನಿಯಮ ಉಲ್ಲಂಘಿಸಿ ಟೀ ಮಾರಾಟಕ್ಕೆಂದು ಓಡಾಡುವವರೂ ಸೇರಿದ್ದಾರೆ. ಬಂಧಿತರನ್ನು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net