

ಡಾ.ಖುಸ್ರೋ ಹುಸೇನಿ ಅದ್ವಿತೀಯ ಪಂಡಿತ: ಪ್ರಿಯಾಂಕ್ ಖರ್ಗೆ ಬಣ್ಣನೆ
ಕಲಬುರಗಿ: ಜಿಲ್ಲೆಯಲ್ಲಿ ಸೂಫಿ-ಸಂತ ಪರಂಪರೆಯ ಬೇರುಗಳು ಆಳವಾಗಿವೆ. ಇಷ್ಟೊಂದು ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಖ್ವಾಜಾ ಬಂದೇನವಾದ್ ದರ್ಗಾದ ಸಂದಲ್ ಮೆರವಣಿಗೆ ಹಾಗೂ ಉರುಸ್ ಹಿನ್ನೆಲೆಯಲ್ಲಿ ಖ್ವಾಜಾ ಬಂದೇನವಾಜ್ ದರ್ಗಾದ ಬಳಿ ಆಯೋಜಿಸಲಾಗಿದ್ದ ಅಖಿಲ ಭಾರತ ಕೈಗಾರಿಕಾ ವಸ್ತು ಪ್ರದರ್ಶನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಇತಿಹಾಸ ಬಹಳ ಪ್ರಾಚೀನವಾಗಿದೆ. ಆದರೆ ಇತ್ತೀಚೆಗೆ ನಾವು ಪರರ ಪ್ರೀತಿಗೆ ಗೌರವ ನೀಡುವುದನ್ನು ಬಿಟ್ಟುಬಿಟ್ಟಿದ್ದೇವೆ. ಪ್ರೀತಿಯ ಪಾಠವು ನಮಗೆ ಸುಫಿ ಸಂತರಿಂದ ಸಿಕ್ಕಿದೆ. ಹಜರತ್ ಡಾ. ಸಯ್ಯದ್ ಶಾ ಗಿಸುದರಾಜ್ ಖುಸ್ರೋ ಹುಸ್ಸೈನೀ ರಹ್ಮತ್‌ಲ್ಲಾಹ್ ಅಲೈಹಿಯವರನ್ನು "ಅದ್ವಿತೀಯ ಪಂಡಿತ" ಎಂದು ವರ್ಣಿಸಿದರು. ಸುಫಿ ಅಧ್ಯಯನ ಕ್ಷೇತ್ರದಲ್ಲಿ ಸಹಕಾರದಿಂದ ಕೆಲಸ ಮಾಡುವೆವು ಎಂದರು. ಸಜ್ಜಾದ ನಶೀನ್ ಅವರ ನೇತೃತ್ವದಲ್ಲಿ ನಡೆದ ಸಂವಿಧಾನ ರಕ್ಷಣಾ ಸಮಾವೇಶ ಯಶಸ್ವಿಯಾಗಿದೆ. ಲಕ್ಷ ಜನರು ಸೇರಿದ್ದರೂ ಸಹ ಒಂದೇ ಒಂದು ದುರ್ಘಟನೆ ಆಗಿಲ್ಲ. ಘಟನೆ ಇದು ಅವರ ನೇತೃತ್ವದ ಪ್ರತಿಫಲ ಎಂದರು.
ಖ್ವಾಜಾ ಬಂದೇನವಾಜ ದರ್ಗಾದ ಸಜ್ಜಾದ್ ನಶೀನ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಮಾತನಾಡಿ, ಸೂಫಿ ಪರಂಪರೆಯ ಹಿನ್ನೆಲೆಯ ಹಜರತ್ ಖಾಜಾ ಬಂದೇನವಾಜ್ ದರ್ಗಾದ ಉರೂಸ್ ಕೇವಲ ಭಾರತ ಮಾತ್ರವಲ್ಲ ಪ್ರಪಂಚದಲ್ಲೆಲ್ಲ ಪ್ರಸಿದ್ಧವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲು ಕೆನಡಾ ಹಾಗೂ ಇಂಗ್ಲೆಂಡ್ ದೇಶದಿಂದ ಪ್ರವಾಸಿಗರು ಬಂದು ಹೋಗಿದ್ದಾರೆ. ಉರೂಸ್ ಆಚರಣೆಗಳು ಬಹಳ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಉರೂಸ್ ಸಂದರ್ಭದಲ್ಲಿ ವ್ಯಾಪಾರಸ್ಥರು ಬಂದು ಇಲ್ಲಿ ಅಂಗಡಿಗಳನ್ನು ಹಾಕುತ್ತಿದ್ದಾರೆ. ಇಲ್ಲಿ ಬರುವ ಎಲ್ಲರಿಗೂ ಶುಭವಾಗಲಿ ಎಂದರು.
ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಲಬುರಗಿಯ ಈ ನೆಲ ಭ್ರಾತೃತ್ವಕ್ಕೆ ಹೆಸರಾಗಿದೆ. ಸೂಫಿ ಹಾಗೂ ಸಂತ ಪರಂಪರೆಯ ಶರಣಬಸವೇಶ್ವರ ಹಾಗೂ ಖಾಜಾ ಬಂದೇನವಾಜ್ ದರ್ಗಾ ಈ ಭಾಗದ ಎರಡು ಪ
ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಲಬುರಗಿಯ ಈ ನೆಲ ಭ್ರಾತೃತ್ವಕ್ಕೆ ಹೆಸರಾಗಿದೆ. ಸೂಫಿ ಹಾಗೂ ಸಂತ ಪರಂಪರೆಯ ಶರಣಬಸವೇಶ್ವರ ಹಾಗೂ ಖಾಜಾ ಬಂದೇನವಾಜ್ ದರ್ಗಾ ಈ ಭಾಗದ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಎಲ್ಲ ಧರ್ಮದ ಜನರು ಇಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದು ಆದು ಸಹೋದರತೆಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಮುಸ್ತಾಫಾˌ ಹಜರತ್ ಸಯ್ಯದ್ ಶಾ ತಕೀ ಉಲ್ಲಾಹ್ ಹುಸೇನಿ, ಹಜರತ್ ಸಯ್ಯದ್ ಅಕ್ಬರ್ ಹುಸೇನಿ, ಸಜ್ಜಾದ್ ಹುಸೈನ್ ಮನಿಯಾರ, ಜನಾಬ್ ಮಜ್ಹರ್ ಹುಸೈನ್, ಕುಡಾ ಅಧ್ಯಕ್ಷ ಮಜ್ಹರ್ ಆಲಂ ಖಾನ್ˌ ವಕೀಲ ಜನಾಬ್ ಸಯ್ಯದ್ ವಾಜಿದ್, ಡಾ. ಮಾಜಿದ್ ದಾಘಿ, ಡಾ. ಮಂಜೂರ್ ಅಹ್ಮದ್ ದಖನಿ, ಡಾ. ಮೊಹಮ್ಮದ್ ಕಮರುದ್ದೀನ್ ಅಲೀಗ್, ಪ್ರೊ. ಇಕ್ಬಾಲ್ ಅಹ್ಮದ್ ಮಟು ಡೀನ್, ಖ್ವಾಜಾ ಬಂದೆ ನವಾಜ್ ಯೂನಿವರ್ಸಿಟಿ, ಡಾ. ಅಸ್ಪಾಕ ಚುಲಬುಲ್, ಡಾ. ಮೊಹಮ್ಮದ್ ಅಲಿ, ಅಬ್ದುಲ್ ರಶೀದ್ ಖಾನ್ ದುರಾನಿ, ಕಾರ್ಪೊರೇಟರ್‌ಗಳು, ವೈದ್ಯರು, ಜ್ಞಾನಿಗಳು, ಉಲಮಾ, ಮಶಾಯಖೀನ್, ವ್ಯಾಪಾರಿಗಳು, ಮುರೀದಿನ್ ಮತ್ತು ಶ್ರದ್ಧಾವಂತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದರು.