ಗೆಲುವಿನತ್ತ ಖರ್ಗೆ ಅಜಯಸಿಂಗ್ ಡಾ.ಶರಣಪ್ರಕಾಶ, ಅಲ್ಲಮಪ್ರಭು

IMG-20230513-WA0007
Published on

ಕಲಬುರಗಿ : ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಯರ್ಥಿ ಪ್ರಿಯಾಂಕ್ ಖರ್ಗೆ, ಜೇವರ್ಗಿಯಲ್ಲಿ ಡಾ.ಅಜಯಸಿಂಗ್ ಧರ್ಮಸಿಂಗ್ , ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್ ನ ಅಲ್ಲಮಪ್ರಭು ಪಾಟೀಲ್ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.

-ಚಿಂಚೋಳಿ ಕ್ಷೇತ್ರದಲ್ಲಿ 7ನೇ ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು ಬಿ.ಜೆ.ಪಿ-29177,ಕಾಂಗ್ರೆಸ್-26289, ಜೆ.ಡಿ.ಎಸ್-2531 ಪಡೆದಿದ್ದು
ಬಿ.ಜೆ.ಪಿ. 2888 ಮತಗಳ‌ ಅಂತರದಿಂದ ಮುನ್ನಡೆ‌ ಸಾದಿಸಿದ್ದಾರೆ.

-ಅಫಜಲಪೂರ ಕ್ಷೇತ್ರದಲ್ಲಿ
8ನೇ ಸುತ್ತಿನ ಎಣಿಕೆ ಪೂರ್ಣಗೊಂಡಾಗ ಪಕ್ಷೇತರ-22440

ಕಾಂಗ್ರೆಸ್-20017

ಬಿ‌.ಜೆ.ಪಿ.-12777

ಪಕ್ಷೇತರ ಅಭ್ಯರ್ಥಿ ನಿತೀಜ 2423 ಮತಗಳ‌ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.-

ಚಿತ್ರಾಪುರ ಕ್ಷೇತ್ರದಲ್ಲಿ 13ನೇ ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್-61014, ಬಿ.ಜೆ.ಪಿ.-45562, ಕಾಂಗ್ರೆಸ್ 15452 ಮತಗಳ‌ ಅಂತರದಿಂದ ಮುನ್ನಡೆ‌ ಸಾಧಿಸಿದ್ದು ಗೆಲುವಿನ ಹಂತಕ್ಜೆ ಬಂದಿದ್ದಾರೆ. ಚಿತ್ತಾಪುರ ಹಾಗೂ ಜೇವರ್ಗಿ ಮತ್ತು ಸೇಡಂ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು ಮೂವರು ಗೆಲುವಾಗಿದೆ.‌ಅಧಿಕೃತ ಘೋಷಣೆ ಬಾಕಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net