

ಕಲಬುರಗಿ ಜಿಲ್ಲಾ ನಗರ ಪೊಲೀಸರ ಜೀವಾಳ | ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರ ಮತ್ತು ಜಿಲ್ಲೆಯಲ್ಲಿ ಸಂಭವಿಸಿದ ೯೦೦ಕ್ಕೂ ಹೆಚ್ಚಿನ ಕ್ರೆÊಂಗಳನ್ನು ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜಿಲ್ಲಾ ಪೊಲೀಸ್ ಕ್ರೆÊಂ ಸ್ಕಾö್ವಡ್‌ದಲ್ಲಿದ್ದ ಪತ್ತೇದಾರಿ ಶ್ವಾನ ರೀಟಾ ಇನ್ನೂ ನೆನಪು ಮಾತ್ರ. ಅನಾರೋಗ್ಯದಿಂದಾಗಿ ಬುಧವಾರ ಬೆಳಗ್ಗೆ ಕೊನೆಯಿಸಿರೆಳೆಯಿತು. ಶ್ವಾನದ ಕಾರ್ಯವೈಖರಿ ಕಂಡಿದ್ದ ಪೊಲೀಸರ ಕಣ್ಣಾಲೆಗಳಲ್ಲಿ ನೀರಾಡಿದವು. ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ತಮ್ಮ ಕುಟುಂಬದ ಸದಸ್ಯನ ಕಳೆದುಕೊಂಡೇವು ಎಂದು ಕಣ್ಣೀರಿಟ್ಟರು.
ದಶಕದ ಕಾಲ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ರೀಟಾ, ಅನಾರೋಗ್ಯ ಕಾಣಿಸಿಕೊಂಡಿದದ್ದರಿAದ ವೈದ್ಯರ ಸಲಹೆಯಂತೆ ಕಳೆದ ತಿಂಗಳ ನಿವೃತ್ತಿಗೊಂಡಿತ್ತು. ಬಳಿಕ ವೈದ್ಯರ ಸಲಹೆಯಂತೆ ಆರೈಕೆ ಮಾಡಲಾಯಿತು. ಆದರೂ,ಬುಧವಾರ ಬೆಳಗಿನ ಜಾವ ನಾಯಿ ರೀಟಾ ಕೊನೆಯುಸಿರೆಳೆಯಿತು.
ನಗರದ ಡಿಆರ್ ಮೈದಾನದಲ್ಲಿ ಪತ್ತೇದಾರಿ ಶ್ವಾನ ರೀಟಾ ಕಳೆಬರಹಕ್ಕೆ ಸಂಪ್ರದಾಯದAತೆ ಸ್ನಾನ ಮಾಡಿಸಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಜಿಲ್ಲಾ ಮತ್ತು ನಗರ ಪೊಲೀಸ್ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ರೀಟಾಗೆ ಎಸ್ಪಿ ಅ್ಡಡ್ಡೂರು ಅವರು ಪುಷ್ಪ ಗುಚ್ಛ ಇರಿಸಿ ಅಂತಿಮ ನಮನ ಹಾಗೂ ಗೌರವ ಸಲ್ಲಿಸಿದರು. ನಂತರ ಡಿಆರ್‌ಎ ಡಿವೈಎಸ್ಪಿ ಶರಣಪ್ಪ ಸೇರಿದಂತೆ ಎಲ್ಲ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು. ಡಿವೈಎಸ್ಪಿ ಶರಣಪ್ಪ, ಜಿಲ್ಲಾ ವಿಶೇಷ ವಿಭಾಗದ ಇನ್‌ಸ್ಪೆಕ್ಟರ್ ಹಮೀದ್ ಪಟೇಲ್, ಆರ್‌ಪಿಐ ಶಿವಕುಮಾರ ಮುದ್ದಾ, ಮಲ್ಲಯ್ಯ ಹಾಗೂ ಸಿಬ್ಬಂದಿ ಇದ್ದರು.
ರೀಟಾ ಪಾರ್ಥಿವ ಶರೀರ ಹೂವುಗಳಿಂದ ಮುಚ್ಚಿ ಹೋಗಿತ್ತು. ಗೌರವಾರ್ಥ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸಲ್ಲಿಸಿದರು. ಬಳಿಕ ಎರಡು ನಿಮಿಷ ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಲಾಯಿತು. ನಂತರ ಹುತಾತ್ಮರ ಸ್ಮಾರಕದ ಬಳಿಯ ಸ್ಥಳದಲ್ಲಿ ರೀಟಾ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕ್ರೆÊಂ ಸ್ವಾö್ಕಡ್‌ನಲ್ಲಿ ೧೧ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶ್ವಾನ ರೀಟಾ ಕೆಲಸ ಮಾದರಿಯಾಗಿತ್ತು. ೯೦೦ಕ್ಕೂ ಹೆಚ್ಚಿನ ಕೇಸ್‌ಗಳನ್ನು ಪತ್ತೆ ಮಾಡಲು ಸಹಕಾರಿಯಾಗಿದೆ. ಅದರಲ್ಲೂ ೮೦ಕ್ಕೂ ಹೆಚ್ಚಿನ ಅಂತ್ಯ ಘನಘೋರ ಪ್ರಕರಣ ಪತ್ತೆ ಮಾಡಿದ ಕೀರ್ತಿ ಹೊಂದಿತ್ತು. ಅನಾರೋಗ್ಯದಿಂದ ಕೊನೆಯಿಸಿರೆಳೆದಿದೆ. ಪೊಲೀಸ್ ಇಲಾಖೆ ವಿಶ್ವಾಸರ್ಹ ಶ್ವಾನವನ್ನು ಕಳೆದುಕೊಂಡAತಾಗಿದೆ.
| ಅಡ್ಡೂರು ಶ್ರೀನಿವಾಸುಲು ಎಸ್ಪಿ ಕಲಬುರಗಿ ಜಿಲ್ಲೆ