ಚಿತ್ತಾಪುರ-ಕಲಬುರಗಿ ಸಂಪರ್ಕ ಕಡಿತ

1-9 ctpr .1
Published on


ಚಿತ್ತಾಪುರ: ಶನಿವಾರ ಮತ್ತು ಭಾನುವಾರ ಸುರಿದ ನಿರಂತರ ಮಳೆಯಿಂದಾಗಿ ದಂಡೋತಿ ಬಳಿಯ ಕಾಗಿಣೆ ಮೈದುಂಬಿಕೊAಡಿದ್ದು, ಸೇತುವೆ ನೀರು ಹರಿಯುತ್ತಿರುವುದರಿಂದ ಚಿತ್ತಾಪುರ-ಕಲಬುರಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿತ್ತಾಪುರದಿಂದ ಬಸ್ ಹಾಗೂ ವಾಹನಗಳು ಶಹಾಬಾದ್, ಮಳಖೇಡ ಮಾರ್ಗವಾಗಿ ಕಲಬುರಗಿಗೆ ಸಂಚರಿಸಿದವು. ದಿಗ್ಗಾಂವ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಸರ್ಕಾರಿ ಹಿರಿಯ ಶಾಲೆ ಎದುರು ನೀರು ನಿಂತಿದ್ದು, ಮೊಗಲಾ ಗ್ರಾಮದೊಳಗೆ ನೀರು ಹೊಕ್ಕು ಸಂಚಾರಕ್ಕೆ ಸಂಚಕಾರ ಎದುರಾಗಿದೆ. ತಾಲೂಕಿನ ವಿವಿಧೆಡೆ ನಾಲ್ಕು ಭಾಗಶಃ ಸೇರಿ ಎಂಟು ಮನೆ ಕುಸಿದಿವೆ. ಅಲ್ಲೂರ(ಬಿ) ಗ್ರಾಮದ ಭೀಮರಾಯ ಬೋಲೆ ಎಂಬುವರ ಮನೆ ಮೇಲೆ ಹಿಂದಿನ ಗುಂಡುಕಲ್ಲು ಬಿದ್ದಿದ್ದರಿಂದ ಕುಸಿದಿದ್ದು, ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದರಿAದ ಅಪಾಯದಿಂದ ಪಾರಾಗಿದ್ದಾರೆ. ಬಳವಡಗಿ ಗ್ರಾಮದ ೧೨ ಮನೆಗಳಿಗೆ ನೀರು ನುಗ್ಗಿದ್ದು, ಅಗತ್ಯ ವಸ್ತುಗಳು ಹಾಗೂ ದವಸ-ಧಾನ್ಯ ನೀರುಪಾಲಾಗಿವೆ. ಕಡಬೂರ ಗ್ರಾಮದಲ್ಲಿ ವೆಂಕಟೇಶ ಹಾಗೂ ಅಲ್ಲೂರ(ಬಿ)ದ ಮಲ್ಲಪ್ಪ ಸೇರಿ ಮೊಗಲಾ, ಭಂಕಲಗಿಗಳಲ್ಲಿ ತಲಾ ಒಂದೊAದು ಮನೆ ಕುಸಿದಿವೆ. ಅನೇಕ ಹಳ್ಳಿಗಳ ಜಮೀನುಗಳಲ್ಲಿನ ತೊಗರಿ, ಹತ್ತಿ ಇತರ ಬೆಳೆಗಳು ಜಲಾವೃತಗೊಂಡಿದ್ದರಿAದ ರೈತರು ಆತಂಕದಲ್ಲಿದ್ದಾರೆ.
ಭಾನುವಾರ ಚಿತ್ತಾಪುರ ೬೯.೮ ಮಿಮೀ, ಅಳ್ಳೋಳ್ಳಿ ೨೦.೫, ಗುಂಡಗುರ್ತಿ ೩೦.೬, ನಾಲವಾರ ವಲಯದಲ್ಲಿ ೫೪.೨ ಮಿಮೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net