ಆಂಬುಲೆನ್ಸ್​ ಚಾಲಕನ ಅತ್ಯಾಚಾರ ಯತ್ನದಿಂದ ಪಾರಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

AB Driver
Published on

ಕಲಬುರಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆ ಕೋವಿಡ್ ವಾಡ್೯ನಲ್ಲಿ ಅತ್ಯಾಚಾರ ಯತ್ನದಿಂದ ಪಾರಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಘಟನೆಯ ನಂತರ ಯುವತಿ ಮಾನಸಿಕವಾಗಿ ನೊಂದಿದ್ದಳು. ಚಿಕಿತ್ಸೆ ಫಲಿಸದೇ ಇಂದು‌ ಮಧ್ಯಾಹ್ನ ಸಾವಿಗೀಡಾಗಿದ್ದಾಳೆ.

25 ವರ್ಷದ ಯುವತಿ ಕರೊನಾ ಸೋಂಕು ತಗುಲಿ, ಜಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಜೂನ್​ 8ರಂದು ರಾತ್ರಿ ಅಲ್ಲಿಗೆ ಬಂದ ಖಾಸಗಿ ಆಂಬುಲೆನ್ಸ್​ ಚಾಲಕ ಪಿಂಟು ಎಂಬಾತ ಯುವತಿ ಮಲಗಿದ್ದಾಗ ಆಕೆಯ ಡೈಪರ್ ಮತ್ತು ಯೂರಿನ್ ಪೈಪ್ ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ.

ಯುವತಿ ಎಚ್ಚರಗೊಂಡು ಚೀರಾಡುತ್ತಿದ್ದಂತೆ ಅಕ್ಕ-ಪಕ್ಕದ ರೋಗಿಗಳು ಎಚ್ಚರಗೊಳ್ಳುತ್ತಿದ್ದಂತೆ ಆರೋಪಿ ಪಿಂಟು ಅಲ್ಲಿಂದ ಓಡಿಹೋಗಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬ್ರಹ್ಮಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ಆರೋಪಿ ಪಿಂಟುನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net