

ಕಕ್ಕೇರಿ: 12ನೇ ಶತಮಾನದ ಇತಿಹಾಸ ಹೊಂದಿರುವ ಗ್ರಾಮವು ಕಕ್ಕಯ್ಯನವರ ಐಕ್ಯವಾಗಿದ್ದರಿಂದ ಕಕ್ಕೇರಿ ಎಂದು ನಾಮಕರಣಗೊಂಡಿದೆ. ಕಕ್ಕಯ್ಯನವರನ್ನು ಗೌರವಿಸುವ ಕಾರ್ಯವಾಗಬೇಕಿದೆ ಎಂದು ಬೀರವಳ್ಳಿ ಗುರುಮಾತೆ ನಂದಾತಾಯಿ ಹೇಳಿದರು.
ಗ್ರಾಮದ ಶಿವಶರಣ ಡೋಹರ ಕಕ್ಕಯ್ಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಶಿವರಾತ್ರಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಜನೆ, ಕೀರ್ತನೆಗಳ ಮೂಲಕ ಜಾಗರಣೆ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ಸಾಮೂಹಿಕ ವಿವಾಹ ಜರುಗಿದವು. ಮುಖಂಡ ಅನಿಲ ಹುಟಗಿ, ಅರವಿಂದ ೂಡಕೆ, ವೀರಭದ್ರ ಹಾಲಹರವಿ, ಸಂತೋಷ ಸವನೂರ, ಚಂದ್ರಕಾಂತ ಹೋಟಕರ, ಮೋಹನ ಗಜಾಕೋಶ ಇತರರಿದ್ದರು.