ಕಾಜೂರು ಉರುಸ್‌ನಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮ

urus
ದೀಪಾಲಂಕಾರಗೊಂಡಿರುವ ಕಾಜೂರು ದರ್ಗಾ.
Published on

ಬೆಳ್ತಂಗಡಿ: ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ, ನಾಡಿನ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ವರ್ಷಂಪ್ರತಿ ನಡೆಯುವ ಉರುಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಗಮನಸೆಳೆದವು.

ಸಯ್ಯಿದ್ ಕುಂಬೋಳ್ ತಙಳ್, ಸಯ್ಯಿದ್ ಕೂರತ್ ತಙಳ್ ಮತ್ತು ಸಯ್ಯಿದ್ ಕಾಜೂರು ತಙಳ್ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಕಿಲ್ಲೂರು ಖತೀಬ್ ಶಂಶೀರ್ ಸಖಾಫಿ, ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಉಪನ್ಯಾಸ ನಡೆಸಿಕೊಟ್ಟರು.

ಅಂತಾರಾಷ್ಟ್ರೀಯ ಖ್ಯಾತಿಯ ಹಾಡುಗಾರರಾದ ಸಯ್ಯಿದ್ ತ್ವಾಹಾ ತಙಳ್ ಪೂಕೊಟೂರು ಮತ್ತು ಶಹಿನ್ ಬಾಬು ಭಾಗವಹಿಸುವಿಕೆಯಲ್ಲಿ ಪ್ರವಾದಿ ನಾಮಸಂಕೀರ್ತನೆಯ ಬುರ್ದಾ ಮಜ್ಲಿಸ್ ಹಾಗೂ ಪ್ರವಾದಿ ಮದಹ್ ಗೀತೆಗಳ ಇಶಲ್ ನೈಟ್ ಭಾನುವಾರ ನಡೆಯಿತು.

ಸೋಮವಾರ ಅಬ್ದುಲ್ಲತೀಫ್ ಸಖಾಫಿ ಕಾಂದಪುರಂ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಿತು. ಮಂಗಳವಾರ ಅಶ್ಪಾಕ್ ಫೈಝಿ ನಂದಾವರ ಧಾರ್ಮಿಕ ಪ್ರವಚನ ನೀಡಿದರು.

ಉರುಸ್ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ ಕಾಜೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕ್ಕರ್ ಸಿದ್ದೀಕ್, ಜತೆ ಕಾರ್ಯದರ್ಶಿ ಶಾಹುಲ್ ಹಮೀದ್, ಕೋಶಾಧಿಕಾರಿ ಕೆ.ಎಂ.ಕಮಾಲ್ ಉಪಸ್ಥಿತರಿದ್ದರು.

ಸಯ್ಯಿದ್ ಕಾಜೂರು ತಙಳ್, ಸಯ್ಯಿದ್ ಸಿದ್ದೀಕ್ ತಙಳ್ ತೀರ್ಥಹಳ್ಳಿ, ಝೈನುಲ್ ಆಬಿದೀನ್ ಜಿಫ್ರಿ ತಙಳ್ ದಾರುಸ್ಸಲಾಂ, ಕಾಜೂರು ಮುದರ್ರಿಸ್ ಮುಹಮ್ಮದ್ ತೌಸೀಫ್ ಸಅದಿ ಹರೇಕಳ ಭಾಗಿಯಾಗಿದ್ದರು. ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಸುಬ್ಬಾಪುರಮಠ, ವಕ್ಫ್ ಜಿಲ್ಲಾಧಿಕಾರಿ ಅಬೂಬಕ್ಕರ್ ಸಾಲೆತ್ತೂರು ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಶರೀಅತ್ ಪದವಿ ಪ್ರದಾನ

ಮೇ 8ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜಿನ ಎರಡನೇ ವರ್ಷದ ಸನದು ದಾನ(ಪದವಿ ಪ್ರದಾನ) ಕಾರ್ಯಕ್ರಮ ನಡೆಯಲಿದೆ. ಖಾಝಿ ಮಾಣಿ ಉಸ್ತಾದ್, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಙಳ್ ನೇತೃತ್ವ ವಹಿಸಲಿದ್ದಾರೆ.

ಉರುಸ್ ಸಮಾರೋಪ

9ರಂದು ಬೃಹತ್ ದಿಕ್ರ್ ಮಜ್ಲಿಸ್ ನಡೆಯಲಿದೆ. 12ರಂದು ಸಂಜೆ ಮಗ್ರಿಬ್ ಬಳಿಕ ಸರ್ವಧರ್ಮೀಯ ಸಮನ್ವಯ ಕಾರ್ಯಕ್ರಮ, ರಾತ್ರಿ 10ಕ್ಕೆ ಉರುಸ್ ಸಮಾರೋಪ ನಡೆಯಲಿದೆ. ಡಾ.ಹಕೀಂ ಅಝ್ಹರಿ, ಮೌಲಾನಾ ಶಾಫಿ ಸಅದಿ, ಡಾ.ಝೈನಿ ಕಾಮಿಲ್ ಸಖಾಫಿ, ಸಚಿವ ಝಮೀರ್ ಅಹಮದ್ ಖಾನ್, ವೈ ಅಬ್ದುಲ್ಲ ಕುಞಿ ಯೆನಪೋಯ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net