ಕೈವಾರ ತಾತಯ್ಯ ಸಂಗೀತೋತ್ಸವ ಸಡಗರ

. ಕೈವಾರ ಯೋಗಿನಾರೇಯಣ ಸಭಾಂಗಣದಲ್ಲಿರುವ ತಾತಯ್ಯನವರು ಉತ್ಸವಮೂರ್ತಿಗೆ ಧರ್ಮಾಧಿಕಾರಿ ಡಾ. ಎಂ.ಅರ್.ಜಯರಾಮ್ ದಂಪತಿ ಮತ್ತಿತರರು ಪೂಜೆ ಸಲ್ಲಿಸಿದರು.
19cmy9
. ಕೈವಾರ ಯೋಗಿನಾರೇಯಣ ಸಭಾಂಗಣದಲ್ಲಿರುವ ತಾತಯ್ಯನವರು ಉತ್ಸವಮೂರ್ತಿಗೆ ಧರ್ಮಾಧಿಕಾರಿ ಡಾ. ಎಂ.ಅರ್.ಜಯರಾಮ್ ದಂಪತಿ ಮತ್ತಿತರರು ಪೂಜೆ ಸಲ್ಲಿಸಿದರು.
Published on

ವೇದಿಕೆಯಲ್ಲಿ ಉತ್ಸವಮೂರ್ತಿಗೆ ಪೂಜೆ- ಡಾ.ಎಂ.ಆರ್. ಜಯರಾಮ್ ಅವರಿಂದ ಉತ್ಸವ ಉದ್ಘಾಟನೆ


ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮೂರು ದಿನಗಳ ಗುರುಪೂಜಾ-ಸಂಗೀತೋತ್ಸವ ಶುಕ್ರವಾರ ಆರಂಭವಾಯಿತು.
ಉತ್ಸವದ ಅಂಗವಾಗಿ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಮಂಗಳವಾದ್ಯಗಳೊಂದಿಗೆ ಗೋಪೂಜೆ ನಂತರ ಅಲಂಕೃತ ತಾತಯ್ಯನವರ ಮೂಲವಿಗ್ರಹಕ್ಕೆ ಪ್ರಥಮ ದರ್ಶನ ಪೂಜೆ ನಡೆಯಿತು.
ನಂತರ ಸದ್ಗುರು ತಾತಯ್ಯನವರ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ದೇವಾಲಯದಿಂದ ಮಂಗಳವಾದ್ಯಗಳ ಸಮೇತರಾಗಿ ಸಂಗೀತ ಸಭಾಂಗಣಕ್ಕೆ ಕರೆ ತರಲಾಯಿತು. ಅಲಂಕೃತ ಪೀಠದ ಮೇಲೆ ಸದ್ಗುರು ತಾತಯ್ಯನವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ಅವರು ಸಂಗೀತೋತ್ಸವವನ್ನು ಉದ್ಘಾಟಿಸಿದರು.
ಮೊದಲಿಗೆ ಎಂ.ಆರ್ ಜಯರಾಮ್ ನೇತೃತ್ವದಲ್ಲಿ ಸಂಕೀರ್ತನೆಯನ್ನು ಸಮರ್ಪಿಸಲಾಯಿತು. ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿದ್ವಾಂಸರು ಸಂಗೀತ ಸೇವೆ ನಡೆಸಿಕೊಟ್ಟರು. ಸ್ಥಳೀಯ ನಾದಸ್ವರ, ತವಿಲ್ ವಾದಕರು ಸಾಥ್ ನೀಡಿದರು.
ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಸಂಗೀತ ಕಛೇರಿ ವ್ಯವಸ್ಥೆ ಮಾಡಲಾಗಿದೆ. ಬೃಹತ್ ವೇದಿಕೆಯನ್ನು ಹಾಕಲಾಗಿದೆ. ವೇದಿಕೆಯನ್ನು ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರ ವೇದಿಕೆ ಎಂದು ವಿಂಗಡಿಸಿ ಎರಡು ಬದಿಯಲ್ಲಿ ಸಂಗೀತಗಾರರು ಕುಳಿತು ಸಂಗೀತ ಸಮರ್ಪಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ ನಡೆದ ಸಂಗೀತ ಕಾರ್ಯಕ್ರಮಗಳಲ್ಲಿ ಡಾ. ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಎಂ.ಗಾಯತ್ರಿ, ಲೀಲಾ ಲಕ್ಷ್ಮೀನಾರಾಯಣ್, ಕೈವಾರ ರಾಮನ್ನ, ಕರಿಯಣ್ಣನವರ್ ತಂಡ, ಸಿ.ಆರ್. ನಟರಾಜ್, ವಿದ್ಯಾಲತಾ, ಲಕ್ಷ್ಮೀ ಕೆಂಪರಾಜ್, ಶಿಲ್ಪಾ ಶಶಿಧರ್, ವಿವೇಕ್ ಸದಾಶಿವಂ ಮುಂತಾದವರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಸಂಜೆ ಪಿ.ಜೆ. ಬ್ರಹ್ಮಾಚಾರಿ ತಂಡದವರಿಂದ ಪಿಟೀಲು ಸೋಲೋ, ಅದಿತಿ ಪ್ರಹ್ಲಾದ್, ವಿನಯ್‌ಶರ್ಮ, ಲಕ್ಷ್ಮೀ ಹೊಸೂರು, ಡಿ.ಆರ್.ರಾಜಪ್ಪ ಕೋಲಾರ ತಂಡದವರಿಂದ ಗಾಯನ ಹಾಗೂ ಭವ್ಯಾ ಮಂಜುನಾಥ್ ತಂಡ ಭರತನಾಟ್ಯ ಪ್ರದರ್ಶಿಸಿತು.

ಇಂದಿನ ಕಾರ್ಯಕ್ರಮ
ಇಂದು (ಜು.20) ಬೆಳಗ್ಗೆ ನಾದಸ್ವರ, ಮಾಲೂರು ಮಂಜುನಾಥ್, ಡಾ. ಎಂ.ವಿ. ಶ್ರೀನಿವಾಸಮೂರ್ತಿ, ತಿರುಪತಿ ಬಿ.ರಘುನಾಥ್, ಕೆ.ಎಸ್.ಶ್ವೇತಾ, ಮರಕತವಲ್ಲಿ, ಮುರಳಿ, ವಿಷ್ಣು ವೆಂಕಟೇಶ್, ಜಿ.ಎಸ್. ಬ್ರಹ್ಮೇಂದ್ರ, ಎ.ವಿ.ವಿಶ್ವನಾಥ್, ಕೃಷ್ಣ ಹೊಸೂರು, ಲಾವಣ್ಯ ರೂಪಕಲಾ, ಅಪರ್ಣ ಕೃಷ್ಣಮೂರ್ತಿ, ವಾನರಾಶಿ ಬಾಲಕೃಷ್ಣ ಭಾಗವತರ್ ಮುಂತಾದವರಿಂದ ಸಂಗೀತ ಕಾರ್ಯಕ್ರಮ.
ಸಂಜೆ ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ ಪಿಟೀಲು, ಸಿ.ಕೆ.ಪತಂಜಲಿ ತಂಡ ಕೊಳಲು, ಕೇರಳದ ಸೂರ್ಯಗಾಯತ್ರಿ ಗಾಯನ, ಸಿಕ್ಕಿಲ್ ಗುರುಚರಣ್ ತಂಡದವರಿಂದ ಗಾಯನ, ಶ್ರೀ ರುದ್ರಾಕ್ಷ ನಾಟ್ಯಾಲಯ ಬೆಂಗಳೂರು ಅವರಿಂದ ಭರತನಾಟ್ಯ, ಚೆನ್ನೈನ ಕೆ.ವಿ. ಪ್ರಸಾದ್, ಬಿ.ಹರಿಕುಮಾರ್, ಬೆಂಗಳೂರು ಪ್ರವೀಣ್ ಮೃದಂಗ ವಾದನವಿರುತ್ತದೆ. ಡಾ.ಎ.ವಿಜಯ್ ಕಾರ್ತೀಕೇಯನ್, ವಿ.ಪ್ರಕಾಶ್ ಇಳಯರಾಜ, ಪಿ.ಎಂ.ರಂಜಿತ್ ವಿನಾಯಕ್, ಬಿ.ಮುತ್ತುಕುಮಾರ್, ಮಲೈ ಎಂ.ಕಾರ್ತೀಕೇಯನ್, ಜಿ.ವಿನೋದ್ ಕುಮಾರ್, ಟಿ.ಜಿ.ಗೋವಿಂದರಾಜು, ಟಿ.ಜಿ.ಮುತ್ತುಕುಮಾರ್ ರವರಿಂದ ವಿಶೇಷ ನಾದಸ್ವರ, ತವಿಲ್ ವಾದನ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net