ನಾಳೆ ಕೈವಾರ ಡೇರಿ ಸಾಮಾನ್ಯ ಸಭೆ

Published on

ಚಿಂತಾಮಣಿ: ಕೈವಾರದ ಮುಖ್ಯ ರಸ್ತೆಯಲ್ಲಿರುವ ನಂದಿನಿ ಭವನದಲ್ಲಿ ಸೆ.15 ರಂದು ಬೆಳಗ್ಗೆ 11ಕ್ಕೆ ಕೈವಾರ ಡೇರಿಯ 2024-&25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಸಂದ ಅಧ್ಯಕ್ಷ ಎಂ.ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೋಚಿಮುಲ್​ ಮಾಜಿ ನಿರ್ದೇಶಕ ಬಿ.ಅಶ್ವತ್ಥ್​ನಾರಾಯಣ, ಬೆಂಗಳೂರು ಜಂಟಿ ನಿರ್ದೇಶಕ ಡಾ.ಎಲ್​.ರಾಘವೇಂದ್ರ, ಚಿಂತಾಮಣಿ ಶಿಬಿರದ ಉಪ ವ್ಯವಸ್ಥಾಪಕ ಡಾ.ಡಿ.ಎಂ.ಮಹೇಶ್​, ವಿಸ್ತರಣಾಧಿಕಾರಿ ಗುಲಾಬ್​ಜಾನ್​, ಕೆನರಾ ಬ್ಯಾಂಕ್​ ವ್ಯವಸ್ಥಾಪಕ ಎಸ್​.ರಾಜೇಶ್​ ಪಾಲ್ಗೊಳ್ಳುವರು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್​.ಬಾಲಕೃಷ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net