ಸಂಭ್ರಮದ ಕಡುಬಿನ ಕಾಳಗ

11GTL1A
Published on

ಗುತ್ತಲ: ಹೊಸರಿತ್ತಿಯ ಗುದ್ದಿಲೀಸ್ವಾಮಿ ಮಠದ 120ನೇ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಡುಬಿನ ಕಾಳಗ ಸಡಗರ, ಸಂಭ್ರಮದಿಂದ ನೆರವೇರಿತು.

ಸಂಪ್ರದಾಯದಂತೆ ಗುದ್ದಲೀಸ್ವಾಮಿ ಮಠದ 5ನೇ ಪೀಠಾಧಿಪತಿ ಗುದ್ದಲೀ ಶಿವಯೋಗೀಶ್ವರ ಸ್ವಾಮಿಜಿ ಆಗಮಿಸುತ್ತಿದ್ದಂತೆ, ನೆರೆದ ಭಕ್ತರು ಹಷೋದ್ಗಾರ ವ್ಯಕ್ತಪಡಿಸಿದರು. ಕಾಳಗದಲ್ಲಿ ಸ್ವಾಮೀಜಿ ಅವರಿಂದ ಸಿಕ್ಕ ಕಬ್ಬಿನ ತುಂಡುಗಳನ್ನು ಪಡೆದ ಭಕ್ತರ ಆನಂದಕ್ಕೆ ಪಾರವೇ ಇರಲಿಲ್ಲ.

ಕಡುಬಿನ ಕಾಳಗದಲ್ಲಿ ಗುದ್ದಲೀ ಶಿವಯೋಗೀಶ್ವರ ಸ್ವಾಮಿಜಿ ಅವರಿಂದ ಕಬ್ಬಿನ ತುಂಡುಗಳು ಸಿಕ್ಕರೆ ವರ್ಷವೀಡಿ ಒಳ್ಳೆಯದಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಅವುಗಳನ್ನು ಪಡೆಯಲು ಭಕ್ತರು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಕ್ತಿಮಂದಿರದ ಆನೆಯ ಕುಣಿತ ಗಮನಸೆಳೆಯಿತು.

ಜಾತ್ರೆಗೆ ಹಾವೇರಿ ಸೇರಿ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net