ಮೂಕ ನಾಗಬೇಕು ಕಿರುಚಿತ್ರ ಶೀಘ್ರ ಬಿಡುಗಡೆ

bkt-10-4
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಚಿತ್ರದ ನಿರ್ದೇಶಕ ಶಿವಾನಂದ ಹಿರೇಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ಮಾಪಕ ರಾಜು ನಾಯ್ಕರ ಇದ್ದರು.
Published on

ಬಾಗಲಕೋಟೆ: ಕಡಕೋಳ ಮಡಿವಾಳಪ್ಪನವರ ಜೀವನಾಧಾರಿತ ಚಿತ್ರ ಮೂಕ ನಾಗಬೇಕು ಎಂಬ ಕಿರುಚಿತ್ರವನ್ನು ರಚಿಸಿದ್ದು, ಜುಲೈ ಕೊನೆಯ ವಾರದಲ್ಲಿ ಚಂದನ ವಾಹಿನಿ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶಿವಾನಂದ ಹಿರೇಮಠ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಕೋಳ ಮಾಡಿವಾಳಪ್ಪನವರ ತತ್ವ ಪದಗಳು, ವಿಶ್ವದಾದ್ಯಂತ ಪ್ರಚಾರವಾಗಿವೆ. ಆದರೆ ಅವರ ಜೀವನದ ಚಿತ್ರಣ ಪ್ರಸಿದ್ದವಾಗಿಲ್ಲ ಅವರ ಹುಟ್ಟು, ಬಾಲ್ಯ, ಶಿಕ್ಷಣ, ಹೋರಾಟ, ಪರಿಶ್ರಮ, ಸಾಮಾಜಿಕ ಮೌಢ್ಯ ಹೋಗಲಾಡಿಸಲು ಮಾಡಿದ ಸಾಮಾಜಿಕ ಕಾರ್ಯಗಳು, ಪವಾಡಗಳ ಕುರಿತು ಇಂದಿನ ಜನತೆಯ ಮುಂದೆ ಬಿಚ್ಚಿಡಬೇಕು ಎನ್ನುವ ಉದ್ದೇಶದಿಂದ ಚಿತ್ರ ಸಿದ್ದಪಡಿಸಲಾಗಿದೆ ಎಂದರು.

ಈ ಚಿತ್ರಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ರಾಜು ನಾಯ್ಕರ ಕೈ ಜೋಡಿದ್ದಾರೆ. ಅವರ ಸಹಕಾರ, ನಿರ್ಮಾಣದ ಜವಾಬ್ದಾರಿಯೊಂದಿಗೆ ಈ ಚಿತ್ರ ಪೂರ್ಣಗೊಂಡಿದೆ. ಡಾ.ಮೀನಾಕ್ಷಿ ಬಾಳಿ ಅವರ ಸಂಶೋಧನಾ ಪ್ರಬಂಧ ತನ್ನ ತಾನು ತಿಳಿದ ಮೇಲೆ ಮತ್ತು ಕಡಕೋಳ ಮಡಿವಾಳಪ್ಪನವರ ತತ್ವ ಪದಗಳ ಕೃತಿಗಳನ್ನು ಅಧ್ಯಯನ ಮಾಡಿ ಈ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಲಾಗಿದೆ. ಈಚಿತ್ರದಲ್ಲಿ ಕಡಕೋಳ ಮಡಿವಾಳಪ್ಪನವರ ಪಾತ್ರದಲ್ಲಿ ಖ್ಯಾತ ಕಲಾವಿದ ಸಂತೋಷ ಉಪ್ಪಿನ ನಟಿಸಿದ್ದಾರೆ. ಸುಕನ್ಯಾ, ರಾಧಿಕಾ, ಯುವ ಮುಖಂಡ ರವಿ ಖಾನಾಪುರ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ರಾಜು ನಾಯ್ಕರ ಮಾತನಾಡಿ, ಮಡಿವಾಳಪ್ಪನವರ ಜೀವನಗಾಥೆ ಇಂದಿನ ಜನತೆಗೆ ತೋರಿಸುವುದು ನಮ್ಮ ಕರ್ತವ್ಯ. ಮೌಢ್ಯಗಳ ವಿರುದ್ಧ ಹೋರಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲು ಶ್ರಮಿಸಿದ, ಅವಮಾನಗಳನ್ನೇ ಸಮಾಜೋದ್ಧಾರಕ್ಕೆ ಬಳಸಿಕೊಂಡ ಅವುಗಳಿಂದಲೇ ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆ ತರಬಯಸುವ ತತ್ವ ಪದಗಳನ್ನು ನಾಡಿಗೆ ನೀಡಿದ ಕಡಕೋಳ ಮಡಿವಾಳಪ್ಪನವರ ಮೂಕನಾಗಬೇಕು ಕಿರು ಚಿತ್ರಕ್ಕೆ ಎಲ್ಲರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net