

ವಿಜಯವಾಣಿ ಸುದ್ದಿಜಾಲ ಕಡಬ
ಕ್ರೀಡಾಕೂಟಗಳು ಯುವ ಪ್ರತಿಭೆಗಳನ್ನು ಬೆಳಕಿಗೆ ತರಲು ವೇದಿಕೆಯಾಗಿವೆ. ಸಾಮಾಜಿಕ ಸೌಹಾರ್ದತೆಗೆ ಕ್ರೀಡಾಕೂಟಗಳು ಪೂರಕ ಎಂದು ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಹೇಳಿದರು.
ಕಡಬದ ಸರ್ಕಾರಿ ಪ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಡಬ ತಾಲೂಕು ಪಂಚಾಯಿತಿ, ಕಡಬ ಪಟ್ಟಣ ಪಂಚಾಯಿತಿ, ಕಡಬ ತಾಲೂಕು ಯುವಜನ ಒಕ್ಕೂಟ, ಕೇಪು ಲಕ್ಷ್ಮೀ ಜನಾರ್ದನ ಯುವಕ ಮಂಡಲ, ಯುವಕ ಮಂಡಲ ಬಿಳಿನೆಲೆ, ಸಂತ ಫಿಲೋಮಿನಾ ಕಾಲೇಜು ಪುತ್ತೂರು ಹಾಗೂ ಕಡಬ ಪ.ಪೂ.ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2024-25ನೇ ಸಾಲಿನ ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಕಡಬ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಾಸುದೇವ ಗೌಡ ಕೋಲ್ಪೆ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಗೌರವಾಧ್ಯಕ್ಷ ಶಿವರಾಮ ಏನೆಕಲ್, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಯುವಜನ ಒಕ್ಕೂಟದ ದ.ಕ.ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಶುಭಹಾರೈಸಿದರು.
ಕೇಪು ಲಕ್ಷ್ಮೀ ಜನಾರ್ದನ ಯುವಕ ಮಂಡಲದ ಅಧ್ಯಕ್ಷ ಶರತ್ ರೈ ನಂದುಗುರಿ, ಬಿಳಿನೆಲೆ ಯುವಕ ಮಂಡಲದ ಅಧ್ಯಕ್ಷ ಪ್ರದೀಪ್ ಸಣ್ಣಾರ, ಕಡಬ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಸಲಿನ್ ಕೆ.ಪಿ., ಕಬೀರ್, ಪ್ರಮುಖರಾದ ಕಾರ್ತಿಕ್ ಕಲ್ಲೇರಿ, ಅನೀಶ್ ಆರಿಗ ಕಡಬ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟಕ್ಕೆ ಕ್ರೀಡಾಂಗಣವನ್ನು ಸಜ್ಜುಗೊಳಿಸುವಲ್ಲಿ ಶ್ರಮಿಸಿದ ಕ್ರೀಡಾಕೂಟದ ಸಂಯೋಜಕ, ಕಡಬ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ತಂಟೆಪ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ಯುವ ಸಬಲೀಕರಣ ಕ್ರೀಡಾ ಇಲಾಖೆಯ ತಾಲೂಕು ನೋಡಲ್ ಅಧಿಕಾರಿ ಮಾಮಚ್ಚನ್ ಎಂ.ಅವರು ಸ್ವಾಗತಿಸಿದರು. ಕ್ರೀಡಾಕೂಟದ ಸಂಚಾಲಕ ಪ್ರೇಮಚಂದ್ರ ಅಜ್ಜರಮೂಲೆ ವಂದಿಸಿದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿದರು.