ಕಬಡ್ಡಿ ಪಂದ್ಯಾವಳಿಗೆ ಚಾಲನೆ

2
Published on

ನಂಜನಗೂಡು: ತಾಲೂಕಿನ ಹೆಮ್ಮರಗಾಲ ಗ್ರಾಮದ ಪಬ್ಲಿಕ್ ಶಾಲೆ ಆವರಣದಲ್ಲಿ ವಿಸ್ಮಯ ಕಬಡ್ಡಿ ತಂಡದಿಂದ ಮೂರನೇ ವರ್ಷದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.


ಮಾಜಿ ಶಾಸಕ ಬಿ.ಹರ್ಷವರ್ಧನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಮೊದಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲು ಗೆಲುವು ಮುಖ್ಯವಲ್ಲ. ಇಂದಿನ ದಿನಗಳಲ್ಲಿ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿ ಪಂದ್ಯಾವಳಿಗಳು ನಡೆದು ಬಂದಿವೆೆ. ಇವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.


25 ತಂಡಗಳು ಭಾಗವಹಿಸಿದ್ದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುತ್ತಿಗೆದಾರ ರಾಯಚೂರು ವೆಂಕಟೇಶ್, ಬಿಜೆಪಿ ಮುಖಂಡ ಸೋಮಣ್ಣ, ಬದನವಾಳು ರಾಮು, ಚಿಕ್ಕರಂಗನಾಯಕ, ಪವಿತ್ರಾ, ಹೆಡತಲೆ ಪುಟ್ಟರಾಜು, ಗೋಳೂರು ಕಾಳಪ್ಪ, ಮಾಡ್ರಳ್ಳಿ ರಂಗಸ್ವಾಮಿ, ಪುಟ್ಟರಾಜು, ತಾಪಂ ಶಿವಣ್ಣ, ರವಿಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net