ಬ್ಯಾಂಕ್ ಆಫ್ ಬರೋಡಾ ತಂಡ ಚಾಂಪಿಯನ್ : ಎಸ್.ಡಿ.ಎಂ.ಕಾಲೇಜು ಉಜಿರೆ ರನ್ನರ್ಸ್ : ಪುರುಷರ ಕಬಡ್ಡಿ ಪಂದ್ಯಾಟ

9
Published on

ಸುಳ್ಯ: ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ಕರ್ನಾಟಕ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಆಹ್ವಾನಿತ 12 ತಂಡಗಳ ಅಂತಾರಾಜ್ಯ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ, ಬ್ಯಾಂಕ್ ಆಫ್ ಬರೋಡಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಐವರ್ನಾಡು ಸ.ಪ.ಪೂ. ಕಾಲೇಜು ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಪಂದ್ಯ ನಡೆದಿದ್ದು, ಬ್ಯಾಂಕ್ ಆಫ್ ಬರೋಡಾ ತಂಡ 70,000 ರೂ. ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಎಸ್.ಡಿ.ಎಂ. ಕಾಲೇಜು ಉಜಿರೆ ತಂಡ 50,000 ರೂ. ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಆಳ್ವಾಸ್ ಕಾಲೇಜು ಮೂಡುಬಿದಿರೆ 25,000 ರೂ.ನೊಂದಿಗೆ ತೃತೀಯ ಮತ್ತು ಎನ್.ಎಂ.ಸಿ. ಸುಳ್ಯ 25,000 ರೂ.ನೊಂದಿಗೆ ಚತುರ್ಥ ಬಹುಮಾನ ಪಡೆದುಕೊಂಡಿತು.

ಬೆಸ್ಟ್ ರೈಡರ್ ಆಗಿ ಎನ್.ಎಂ.ಸಿ. ತಂಡದ ಮಹೇಶ್, ಬೆಸ್ಟ್ ಕ್ಯಾಚರ್ ಆಗಿ ಎಸ್.ಡಿ.ಎಂ.ನ ಕಾರ್ತಿಕ್, ಬೆಸ್ಟ್ ಆಲ್ ರೌಂಡರ್ ಆಗಿ ಬ್ಯಾಂಕ್ ಆಫ್ ಬರೋಡಾದ ಸಾಯಿಪ್ರಸಾದ್ ಬಹುಮಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net