

ತುಮಕೂರು: ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ಮತ ಸೆಳೆಯಲು ಘೋಷಿಸಿದ್ದ ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಚಂಗಾವರ ಮಾರಣ್ಣ ಸಾರಥಿಯಾಗಿ ನೇಮಕವಾಗಿದ್ದಾರೆ.
2020ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಠಿಯಿಂದ ಘೋಷಣೆಯಾಗಿ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತಂದುಕೊಟ್ಟಿದ್ದ ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಬರೊಬ್ಬರಿ 2 ವರ್ಷದ ನಂತರ ಅಧ್ಯಕ್ಷರ ನೇಮಕವಾಗಿದೆ.
ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ದಟ್ಟವಾಗಿರುವ ಕಾಡುಗೊಲ್ಲರು ಕೆಲವು ಕ್ಷೇತ್ರದಲ್ಲಿ Àಲಿತಾಂಶ ನಿರ್ಧರಿಸಬಲ್ಲರು ಹಾಗಾಗಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ದೃಷ್ಠಿಯಲ್ಲಿಟ್ಟುಕೊಂಡು ಶಿರಾ ತಾಲೂಕಿನ ಚಂಗಾವರ ಮಾರಣ್ಣ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ಕಾರ ಘೋಷಿಸಿದೆ.