

ಬಂಟ್ವಾಳ: ಬೊಳ್ಳಾಯಿ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಂದಿನ 5 ವರ್ಷ ಅವಧಿಗೆ ಅಧ್ಯಕ್ಷರಾಗಿ ಕೆ.ಸಂಜೀವ ಪೂಜಾರಿ ಸತತ 7ನೇ ಬಾರಿಗೆ ಹಾಗೂ ಉಪಾಧ್ಯಕ್ಷರಾಗಿ ವಿಠಲ ಬೆಳ್ಚಡ ಚೇಳೂರು ಅವಿರೋಧವಾಗಿ ಆಯ್ಕೆಯಾದರು.
ಈ ಚುನಾವಣಾ ಪ್ರಕ್ರಿಯೆಯನ್ನು ಸಹಕಾರಿ ಅಭಿವೃದ್ಧಿ ಅಧಿಕಾರಿ ಡಾ.ಜ್ಯೋತಿ ಡಿ.ನಿರ್ವಹಿಸಿದರು. ಸಂಘದ ನೂತನ ಆಡಳಿತ ಮಂಡಳಿ ಸದಸ್ಯರಾಗಿ ರಮೇಶ್ ಅನ್ನಪ್ಪಾಡಿ, ಸುಂದರ ಪೂಜಾರಿ ಬೀಡಿನಪಾಲು, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಲೆ ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ, ಸುಜಾತ ಎಂ., ವಾಣಿ ವಸಂತ್ ಮರು ಆಯ್ಕೆಯಾದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಎಜಿಎಂ ಶಿಲ್ಪಾ ಗಣೇಶ್ ಉಪಸ್ಥಿತರಿದ್ದರು.