

ಸುಳ್ಯ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಆಶ್ರಯದಲ್ಲಿ ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನ, ಸುಳ್ಯ ಸೂಂತೋಡು ದಂತ ಚಿಕಿತ್ಸಾಲಯ ಸಹಯೋಗದಲ್ಲಿ ಹಲ್ಲಿನ ಸುರಕ್ಷತೆ ಮಾಹಿತಿ ಕಾರ್ಯಾಗಾರ ಜಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ ಉದ್ಘಾಟಿಸಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಅಧ್ಯಕ್ಷತೆ ವಹಿಸಿದ್ದರು.
ಸೂಂತೋಡು ದಂತ ಚಿಕಿತ್ಸಾಲಯ ಡಾ.ರೇವಂತ್ ಸೂಂತೋಡು ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಮುದ್ದಪ್ಪ ಜಯನಗರ, ಮುಖ್ಯಶಿಕ್ಷಕಿ ಕೆ.ವೀಣಾ, ಸಜ್ಜನ ಪ್ರತಿಷ್ಠಾನ ನಿರ್ದೇಶಕ ಲತ್ೀ ಹರ್ಲಡ್ಕ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು. ಶರ್ೀ ಜಟ್ಟಿಪಳ್ಳ ಸ್ವಾಗತಿಸಿದರು. ವಿದ್ಯಾರ್ಥಿನಿ ಯಶ್ವಿನಿ ಪ್ರಾರ್ಥಿಸಿದರು. ಹಸೈನಾರ್ ಜಯನಗರ ನಿರೂಪಿಸಿದರು. ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ಗಣೇಶ್ ಕುಕ್ಕುದಡಿ ವಂದಿಸಿದರು. ಶಿಕ್ಷಕಿಯರಾದ ನಳಿನಾಕ್ಷಿ, ಭಾರತಿ, ಅಶ್ವಿನಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷೆ ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ, ಜರ್ನಲಿಸ್ಟ್ ಯೂನಿಯನ್ ಸದಸ್ಯರಾದ ಶ್ರೀಧರ್ ಕಜೆಗದ್ದೆ, ಅನಿಲ್ ಕಳಂಜ, ವಿದ್ಯಾರ್ಥಿಗಳು ಭಾಗವಹಿಸಿದ್ದರು.