ಕಂಠೀರವನಗರದಲ್ಲಿ ಕೆಂಪೇಗೌಡ ಜಯಂತಿ; ಶಾಸಕ ಕೆ. ಗೋಪಾಲಯ್ಯ ಭಾಗಿ

Gopalayya
Published on

ಬೆಂಗಳೂರು: ಕಂಠೀರವನಗರ ಕ್ಷೇಮಾವತಿ ಸಂಘ ನಂದಿನಿ ಬಡಾವಣೆಯ ಕಂಠೀರವನಗರದಲ್ಲಿ ಸೋಮವಾರ ಆಯೋಜಿಸಿದ್ದ 515ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೆ. ಗೋಪಾಲಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, ಕೆಂಪೇಗೌಡರು ದಿಟ್ಟ ನಾಯಕತ್ವದ ಮೂಲಕ ಬೆಂಗಳೂರನ್ನು ಅಭಿವೃದ್ಧಿಪಡಿಸಿದ್ದಾರೆ. ದೂರದೃಷ್ಟಿಯ ಮೂಲಕ ನಗರವನ್ನು ಸಾಮಾಜಿಕ, ಆರ್ಥಿಕ ಹಾಗೂ ಸಾಂಸತಿಕ ಪ್ರಗತಿಪರವಾಗಿ ರೂಪಿಸಿದ್ದಾರೆ. ಇಂದು ನಾವು ನೋಡುತ್ತಿರುವ ಬೆಂಗಳೂರಿನ ಮೂಲಸೌಕರ್ಯಗಳು, ರಸ್ತೆ, ಕೆರೆಗಳು, ಮಾರುಕಟ್ಟೆ ಇತ್ಯಾದಿ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿದೆ. ಅವರ ಆದರ್ಶ, ನೇತೃತ್ವ ಹಾಗೂ ಕಾರ್ಯಶಕ್ತಿ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

ಮಂಡಲದ ಅಧ್ಯ ರಾಘವೇಂದ್ರ ಶೆಟ್ಟಿ, ಮಾಜಿ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್​, ಮುಖಂಡರಾದ ಪ್ರಸನ್ನ, ಬೆಟ್ಟೇಗೌಡ, ಹನುಮಂತು,ದೀತ್​ ರವಿ, ಕರಿಯಪ್ಪ, ಬೈಲಪ್ಪ, ನಾರಾಯಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net