

ತುಮಕೂರು: ಹಿಂದೂಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ದುರುದ್ದೇಶಪೂರ್ವಕವಾಗಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ.
ಮಾಲ್ ನಿಮಾರ್ಣದ ಕಾಮಗಾರಿ ತಡೆಹಿಡಿಯುವ ಹೋರಾಟದ ಹಿಂದೆ ಜ್ಯೋತಿಗಣೇಶ್, ಬಿಜೆಪಿಯ ಹೋರಾಟದ ಶ್ರಮವಿದೆ. ಜತೆಗೆ ಕಾನೂನಾತ್ಮಕವಾಗಿ ಈ ಕಾಮಗಾರಿಗೆ ತಡೆ ನೀಡಲು ಶಾಸಕರು ವೈಯಕ್ತಿಕವಾಗಿ ಖರ್ಚು ಮಾಡಿ, ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿರುತ್ತಾರೆ. ಈ ಎಲ್ಲ ಮಾಹಿತಿಗಳು ತಿಳಿದಿದ್ದರು ಕೂಡ ಶಾಸಕರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವು ನಕಲಿ ಹಿಂದುವಾದಿಗಳು ಸುಖಾ-ಸುಮ್ಮನೆ ಆರೋಪ ಮಾಡಿರುತ್ತಾರೆ. ಈ ವಿಚಾರವಾಗಿ ಮಾಹಿತಿಯೇ ಇಲ್ಲದ ಪ್ರಮೋದ್ ಮುತಾಲಿಕರನ್ನು, ತುಮಕೂರಿನ ನಾಗರಿಕರೇ ಅಲ್ಲದವರನ್ನು ಜತೆಯಲ್ಲಿಟ್ಟುಕೊಂಡು ಈ ರೀತಿ ಆರೋಪ ಮಾಡಿರುವುದು ನಿಜಕ್ಕೂ ಖಂಡನಾರ್ಹ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಟಿ.ಎಚ್.ಹನುಮಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಬಳಿಕ ಹೋಟೆಲ್ ನಲ್ಲಿ ಪ್ರಮೋದ್ ಮುತಾಲಿಕ್ರನ್ನು ಖುದ್ದು ಭೇಟಿ ಮಾಡಿದ ಹನುಮಂತರಾಜು, ಬಿಜೆಪಿ ನಗರಾಧ್ಯಕ್ಷ ಧನುಷ್ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಟ್ಟರು.