

ಶಿವಾನಂದ ಹಿರೇಮಠ ಗದಗ
ಜನಸಂಖ್ಯೆ ಅನುಗುಣವಾಗಿ ತಾಪಂ, ಜಿಪಂ ಸದಸ್ಯರ ಸಂಖ್ಯೆ ಹಾಗೂ ವ್ಯಾಪ್ತಿಯನ್ನು ಪುನರ್ವಿಂಡಣೆಗೊಳಿಸಿರುವ ರಾಜ್ಯ ಸೀಮಾ ನಿರ್ಣಯ ಆಯೋಗ ಗದಗ ಜಿಲ್ಲೆಯಲ್ಲಿ ಹಲವು ಮಾರ್ಪಾಡು ಮಾಡಿ ಅಂತಿಮ ಪ್ರಕಟಣೆ ಹೊರಡಿಸಿದೆ. ಸೆ. 19ರ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿದೆ.
ಈ ಹಿಂದೆ ಎರಡೂ ಬಾರಿ ಹೊರಡಿಸಿದ್ದ ಪ್ರಕಟಣೆ ವಿರುದ್ಧ ಹಲವು ಮಾರ್ಪಾಡು ಮಾಡುವಂತೆ ಜನಪ್ರನಿಧಿಗಳು ಸೀಮಾ ನಿರ್ಣಯ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಗದಗ ಜಿಲ್ಲೆಯಲ್ಲಿ ಜಿಪಂ, ತಾಪಂ ಸದಸ್ಯರ ಸಂಖ್ಯೆ ಹಾಗೂ ಚುನಾವಣಾ ಕ್ಷೇತ್ರಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸೆ.7 ರಂದು ಈ ಪ್ರಕಟಣೆ ಹೊರಡಿಸಲಾಗಿದೆ.
ಮಾರ್ಪಾಡು: ಈ ಮೊದಲು 18 ಜಿಪಂ ಸದಸ್ಯ ಸ್ಥಾನ ಹೊಂದಿದ್ದ ಜಿಲ್ಲೆಯಲ್ಲಿ ಕ್ಷೇತ್ರ ಪುನರ್ವಿಗಂಡೆ ನಂತರ 25ಕ್ಕೇ ಹೆಚ್ಚಿಸಲಾಗಿದೆ. 2010ರಲ್ಲಿ 18 ಕ್ಷೇತ್ರಗಳನ್ನು ಗದಗ ಜಿಲ್ಲೆ ಒಳಗೊಂಡಿತ್ತು. ತದ ನಂತರ 19, 24 ಕ್ಷೇತ್ರಗಳಿಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ 25 ಕ್ಷೇತ್ರಗಳಿಗೆ ಹೆಚ್ಚಿಸಿ ಹೊಸ ಪ್ರಕಟಣೆ ಹೊರಡಿಸಿದೆ. ಗದಗ ತಾಲೂಕಿನ ಯಳವತ್ತಿ, ಸುರಣಗಿ, ಕೊಟಮುಚಗಿ, ಗಜೇಂದ್ರಗಡ ತಾಲೂಕಿನ ರಾಜೂರು, ಮುಂಡರಗಿ ತಾಲೂಕಿನ ಕಲಕೇರಿ ಜಿಪಂ ಹಾಗೂ ರೋಣ ತಾಲೂಕಿನ ಹಿರೇಹಾಳ ಕ್ಷೇತ್ರಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಅದೇ ರೀತಿ ಈ ಮೊದಲಿದ್ದ 72 ತಾಪಂ ಸದಸ್ಯ ಕ್ಷೇತ್ರಗಳನ್ನು 77 ಕ್ಕೆ ಹೆಚ್ಚಿಸಿ, ಗದಗ ತಾಲೂಕಿನಲ್ಲಿ ಕಣಗಿನಾಳ ತಾಪಂ ಸದಸ್ಯ ಕ್ಷೇತ್ರ ಬದಲಾಗಿ ಹರ್ಲಾಪುರ ಕ್ಷೇತ್ರವನ್ನು ಸೃಷ್ಟಿಸಲಾಗಿದೆ.
ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ
2016ರಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ಜರುಗಿತ್ತು. 2021ರಲ್ಲಿ ಚುನಾವಣೆ ಜರುಗಬೇಕಿತ್ತು. ಅದಕ್ಕೂ ಮೊದಲು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಪುನರ್ವಿಂಗಡಣೆ ಕೂಗು ಕೇಳಿ ಬಂದ ಹಿನ್ನೆಲೆ ಅಧಿವೇಶದಲ್ಲಿ ಸೀಮಾ ನಿರ್ಣಯ ಆಯೋಗ ರಚನೆಗೆ ಅನುಮೋದನೆ ಪಡೆಯಲಾಯಿತು. ಅದರಂತೆ ಆಯೋಗದ ಮೂಲಕ ಕ್ಷೇತ್ರವಾರು ಜಿಪಂ ಮತ್ತು ತಾಪಂ ಕ್ಷೇತ್ರಗಳನ್ನು ಆಯಾ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಮಾರ್ಪಾಡು ಮಾಡಲಾಗಿದೆ.
ನೂತನ ಜಿಪಂ ಕ್ಷೇತ್ರ- ಗ್ರಾಮಗಳು
1. ಯಳವತ್ತಿ - ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ, ಅಡರಕಟ್ಟಿ, ಹರದಗಟ್ಟಿ, ಕೊಂಡಿಕೊಪ್ಪ, ಗೊಜನೂರು, ಅಕ್ಕಿಗುಂದ, ಪುಟಗಾವ್ ಬಡ್ನಿ, ಹಿರೇ ಮಲ್ಲಾಪುರ, ಬಟ್ಟೂರು, ಶಟ್ಟಿಕೇರಿ, ಕುಂದ್ರಳ್ಳಿ
2. ಸೊರಣಗಿ- ಸೊರಣಗಿ, ಸುವರ್ಣಗಿರಿ, ಆದರಹಳ್ಳಿ, ಸೋಗಿವಾಳ, ಸಂಕದಾಳ, ನಾದಿಕಟ್ಟಿ, ಹುಲ್ಲೂರು, ನೆಲೆಗೋಲ್, ಅಮರಾಪು, ಬಾಲೆಹೊಸುರು.
3. ಕೋಟಮುಚಗಿ- ಕೋಟಮುಚಗಿ, ಕಣಗಿನಹಾಳ, ನಾರಾಯಣಪೂರು, ಹುಯೀಲಗೋಳ, ಕಿರಟಗೇರಿ, ಹಿರೇಕೊಪ್ಪ, ನೀರಲಗಿ, ನಾಗಸಮುದ್ರ, ಚಿಕ್ಕೊಪ್ಪ, ಬೆನಕನಕೊಪ್ಪ, ಹರ್ಲಾಪುರ, ತಿಮ್ಮಾಪೂರು
4. ರಾಜೂರು - ರಾಜೂರು, ಕಾಲಕಾಲೇಶ್ವರ, ಬೈರಾಪುರ ಮತ್ತು ತಾಂಡಾ, ದಿಂಡೂರು, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರು, ಗೋಗೇರಿ, ನಾಗರಸಿಕೊಪ್ಪ ಮತ್ತು ತಾಂಡಾ, ಮಾಟರಂಗಿ, ಕುಂಟೋಜಿ, ಮ್ಯಾಕಲಝುರಿ, ಬೆಣಚಮಟ್ಟಿ, ಗೌಡಗೇರಿ, ಜಿಗೇರಿ, ವೇದಗೋಳ
5. ಕಲಕೇರಿ- ಕಲಕೇರಿ, ಮುಷ್ಠಿಕೊಪ್ಪ, ವೆಂಕಟೇಶನಗರ, ವೀರಾಪುರ ಸೇರಿ 23 ಹಳ್ಳಿಗಳು.
6. ಹಿರೇಹಾಳ- ಹಿರೇಹಾಳ, ಬಳಗೋಡ, ಹೊನ್ನಿಗನೂರು, ಯರೇಕುರುಬನಾಳ, ಮಾಡಲಗೇರಿ, ನೈನಾಪುರ, ಕೊತಬಾಳ, ಮುಗಳಿ, ತಳ್ಳಿಹಾಳ, ಕುರಹಟ್ಟಿ, ಮುದೇನಗುಡಿ, ಜಕ್ಕಲಿ, ಹೊಸಹಳ್ಳಿ, ಜಿಗಳೂರು