ಹುಲಿ ಹತ್ಯೆ ಆರೋಪಿಗಳಿಗೆ ನ್ಯಾಯಾಂಗ ಬಂಧನ

10-KGL-3,,,,,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.4027778, 0.6037501);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 49;
Published on

ಕೊಳ್ಳೇಗಾಲ:ಪಚ್ಚೆದೊಡ್ಡಿ ಅರಣ್ಯ ಪ್ರದೇಶದ ಹುಲಿ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಶುಕ್ರವಾರ ಕೊಳ್ಳೇಗಾಲ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು 13 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದರು.

ಮಲೆ ಮಹದೇಶ್ವರ ಬೆಟ್ಟದ ಪಚ್ಚದೊಡ್ಡಿ ಗ್ರಾಮದ ಪಂಚಮಲ್ಲ, ಗಣೇಶ, ಕಾಂಚಳ್ಳಿ ಗ್ರಾಮದ ಸಂಪಿಗೆ ಮಹದೇವ ಅಲಿಯಾಸ್ ಸಂಪು, ಸಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹಸುವನ್ನು ಕೊಂದು ಹಾಕಿದೆ ಎಂಬ ಕಾರಣಕ್ಕೆ ಹಸುವಿನ ಮೃತದೇಹಕ್ಕೆ ವಿಷ ಹಾಕಿ ಹುಲಿಯ ಹತ್ಯೆ ಮಾಡಿದ್ದರು. ಬಳಿಕ ಸಾಕ್ಷೃ ನಾಶಕ್ಕೆ ಹುಲಿ ದೇಹವನ್ನು ಮೂರು ತುಂಡುಗಳನ್ನಾಗಿ ಮಾಡಿ ಹೂತಿದ್ದರು.

ಅರಣ್ಯ ಅಧಿಕಾರಿಗಳು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 7 ಆರೋಪಿಗಳ ಪೈಕಿ ಸೆರೆ ಸಿಕ್ಕ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಎಸಿಎಫ್ ವಿರಾಜ್, ಆರ್‌ಎಫ್‌ಒಗಳಾದ ನಾಗರಾಜು, ಜೇತೇಂದ್ರ ಅವರು ಬಂಧಿತ ಆರೋಪಿಗಳನ್ನು ಶುಕ್ರವಾರ ಕೊಳ್ಳೇಗಾಲ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಕಾವ್ಯಾ ಅವರು ನಾಲ್ವರು ಆರೋಪಿಗಳನ್ನು ಅ.23ರವರೆಗೆ ನ್ಯಾಯಾಂಗ ಬಂಧನ ಒಪ್ಪಿಸಿ ಆದೇಶಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳಾದ ಪಚ್ಚೆದೊಡ್ಡಿ ಗ್ರಾಮದ ಚಂದು, ಅಭಿ ಅಲಿಯಾಸ್ ಅಭಿಷೇಕ್, ಗಗನದೊಡ್ಡಿ ಗ್ರಾಮದ ಗೋವಿಂದ ಸೆರೆಗೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಅರಣ್ಯ ಇಲಾಖೆಯ ಜೀಪ್ ಚಾಲಕ ನಾರಾಯಣನ ಕೈವಾಡವಿದೆ ಎನ್ನಲಾಗಿದ್ದು ಆತನನ್ನು ಅರಣ್ಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net