ಜೋಯಾಲುಕ್ಕಾಸ್ ಜ್ಯುವೆಲ್ಲರ್ ಶುಭಾರಂಭ

ಜೋಯಾಲುಕ್ಕಾಸ್ ಜ್ಯುವೆಲ್ಲರ್ ಶುಭಾರಂಭ
Published on

ಹಾಸನ: ಜೋಯಾಲುಕ್ಕಾಸ್ ಜ್ಯುವೆಲ್ಲರ್ ಮಳಿಗೆ ನಗರದ ಬಿ.ಎಂ.ರಸ್ತೆಯಲ್ಲಿ ಶುಕ್ರವಾರ ಮರು ಆರಂಭಗೊಂಡಿತು.

ಸಂಸದ ಶ್ರೇಯಸ್ ಪಟೇಲ್, ಮೇಯರ್ ಗಿರೀಶ್ ಚನ್ನವೀರಪ್ಪ, ಉಪಮೇಯರ್ ಹೇಮಲತಾ ಕಮಲ್ ಕುಮಾರ್, ಜಾಯಲುಕ್ಕಾಸ್‌ನ ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ ಜಿನೇಶ್, ರಾಜೇಶ್ ಕೃಷ್ಣನ್ ಸೇರಿದಂತೆ ಇತರ ಗಣ್ಯರು ಉದ್ಘಾಟಿಸಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಜಾಯಾಲುಕ್ಕಾಸ್ ದೇಶದಲ್ಲಿ ನಂಬಿಕಸ್ತ ಹಾಗೂ ಗುಣಮಟ್ಟದ ಆಭರಣಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿದೆ. ಹಾಸನದ ಜನರು ತಮ್ಮ ನೆಚ್ಚಿನ ಆಭರಣಗಳನ್ನು ಇಲ್ಲಿ ಖರೀದಿಸುವಂತೆ ಕರೆ ನೀಡಿದರು.

ಜಾಯಾಲುಕ್ಕಾಸ್ ಹಾಸನದಲ್ಲಿಯೂ ಹಲವು ವರ್ಷಗಳಿಂದ ರಿಯಾಯಿತಿ ದರದಲ್ಲಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಗ್ರಾಹಕರ ನಂಬಿಕೆಯನ್ನು ಗಳಿಸಿದೆ. ಅಲ್ಲದೆ ಕಂತುಗಳ ಮೂಲಕ ಹಣ ಪಾವತಿಸಿ ಆ ಮೂಲಕವೂ ಒಡವೆಗಳನ್ನು ಖರೀದಿಸಲು ಅವಕಾಶ ಕಲ್ಪಿಸಿರುವ ಜಾಯಾಲುಕ್ಕಾಸ್ ಮಳಿಗೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಜಾಯಲುಕ್ಕಾಸ್‌ನ ಕರ್ನಾಟಕದ ಪ್ರಾದೇಶಿಕ ವ್ಯವಸ್ಥಾಪಕ ಜಿನೇಶ್ ಮಾತನಾಡಿ, ಹತ್ತು ವರ್ಷಗಳಿಂದ ಹಾಸನದಲ್ಲಿ ಸೇವೆ ಸಲ್ಲಿಸುತ್ತಿರುವ ಜಾಯಾಲುಕ್ಕಾಸ್, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಆದ್ದರಿಂದ ಎರಡು ಹಂತದ ಕಟ್ಟಡದ ಜತೆಗೆ ನವೀಕರಣಗೊಳಿಸಲಾಗಿದೆ. ಮುಂದಿನ ವರ್ಷ ಪ್ರಾರಂಭಕ್ಕೆ ದೇಶಾದ್ಯಂತ 200 ಮಳಿಗೆ ಪ್ರಾರಂಭದ ಗುರಿಹೊಂದಲಾಗಿದೆ ಎಂದರು.

ದೇಶದಲ್ಲಿ 170ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ನಮ್ಮ ಸಂಸ್ಥೆ ಹಾಸನದಲ್ಲಿ ದೊಡ್ಡ ಮಳಿಗೆಯನ್ನು ಹೊಂದುವ ಜತೆಗೆ ಗ್ರಾಹಕರಿಗೆ ಗುಣಮಟ್ಟದ ಆಭರಣಗಳನ್ನು ರಿಯಾಯಿತಿ ದರದಲ್ಲಿ ವಿಶೇಷ ಆಫರ್ ಗಳೊಂದಿಗೆ ನೀಡುತ್ತಿದೆ ಅಲ್ಲದೆ ಉತ್ತಮ ಪಾಕಿರ್ಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಇದೀಗ ಮೇಕಿಂಗ್ ಚಾರ್ಜಸ್‌ನಲ್ಲಿ ಶೇ.50ರಷ್ಟು ರಿಯಾಯಿತಿ ಒದಗಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net