ಪತ್ರಕರ್ತರ ಪರಿಷೆಗೆ ಮೆರಗು ತಂದ ಮೆರವಣಿಗೆ

Meravanige_Sammelana
Published on

ಪತ್ರಕರ್ತರ ಪರಿಷೆಯನ್ನು ಮತ್ತಷ್ಟು ಕಳೆಗಟ್ಟುವಂತೆ ಮಾಡಿದ್ದು ಪತ್ರಕರ್ತರ ಮೆರವಣಿಗೆ. ಈ ಉತ್ಸವವನ್ನು ಸಾಂಸತಿಕ ಕಲಾ ತಂಡಗಳು ವೈಭವಗೊಳಿಸಿದವು. ನಾಡಿನೆಲ್ಲಡೆಯಿಂದ ಆಗಮಿಸಿದ್ದ ಪತ್ರಕರ್ತರನ್ನು ನಗರದ ಟೌನ್​ಹಾಲ್​ ವೃತ್ತದಿಂದ ಸಮ್ಮೇಳನ ಆಯೋಜಿಸಿದ್ದ ಎಸ್​ಎಸ್​ಐಟಿ ಕಾಲೇಜು ಆವರಣದವರೆಗೆ ಉತ್ಸವದಲ್ಲಿ ಕರೆದೊಯ್ಯಲಾಯಿತು.

ನಗರದ ಟೌನ್​ಹಾಲ್​ ವೃತ್ತದಲ್ಲಿ ಲಕ್ಷ್ಮೀ ಆನೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಮೆರವಣಿಗೆಗೆ ಚಾಲನೆ ನೀಡಿದರು. ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಪಾವಗಡದ ರಾಮಕೃಷ್ಣ ಸೇವಾಶ್ರಮದ ಜಪಾನಂದ ಜೀ, ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಶಿವಾನಂದತಗೂಡುರು, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಇದ್ದರು.

ಪತ್ರಿಕೆಗಳನ್ನು ಓದುವ ಮೂಲಕ ನಮ್ಮ ದಿನಚರಿ ಆರಂಭವಾಗುತ್ತದೆ. ಪತ್ರಕರ್ತರು ವಾಸ್ತವ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ನಾಡಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಭವಿಷ್ಯ, ಭೂತಕಾಲದ ಬಗ್ಗೆ ಹೆಚ್ಚು ಮಹತ್ವ ನೀಡದೆ ವರ್ತಮಾನದ ಬಗ್ಗೆ ಹೆಚ್ಚು ಗಮನ ಹರಿಸುವ ಮೂಲಕ ವಾಸ್ತವ ಸುದ್ದಿಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು. ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ದಗಂಗಾ ಮಠಾಧ್ಯಕ್ಷ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳಿಗೆ ಸಹಕಾರ ರೂಪ, ಮಾನವೀಯ ರೂಪ ಕೊಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ನಮ್ಮ ವರ್ತಮಾನವನ್ನು ಗಟ್ಟಿಯಾಗಿ ರೂಪಿಸಿಕೊಂಡಾಗ ಪತ್ರಕರ್ತರ ಭವಿಷ್ಯ ಅರ್ಥಪೂರ್ಣವಾಗಿ ಮುಂದುವರೆಯುತ್ತದೆ. ಪತ್ರಿಕೋದ್ಯಮ ಅವರಸರದ ಸಾಹಿತ್ಯ. ಮನುಷ್ಯನಿಗೆ ಸಾಹಿತ್ಯದ ಅಭಿರುಚಿಯನ್ನು ದಿನಪತ್ರಿಕೆಗಳು ಹುಟ್ಟಿಸುತ್ತವೆ. ಇದು ಕೇವಲ ಪತ್ರಕರ್ತರ ಸಮ್ಮೇಳನವಲ್ಲ, ಇದೊಂದು ಸಾಂಸ್ಕೃತಿಕ ಹಬ್ಬವಾಗಿದೆ. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷ, ರಾಮಕೃಷ್ಣ ವಿವೇಕಾನಂದ ಆಶ್ರಮ

ಪತ್ರಕರ್ತರು ಅಕ್ಷರ ಲೋಕದ ಪ್ರತಿನಿಧಿಗಳು ಮಾತ್ರವಲ್ಲ, ಜನಪರ ಧ್ವನಿಯ ಪ್ರತಿನಿಧಿಗಳು ಹೌದು. ಸೃಷ್ಟಿಕರ್ತನಿಗಿಂತಲೂ ಪತ್ರಕರ್ತ ದೊಡ್ಡವನು ಎನ್ನುವುದು ನನ್ನ ಅನಿಸಿಕೆ. ಯಾವುದೇ ಲೋಪ ಇಲ್ಲದ ಹಾಗೆ ತೆರೆಯ ಹಿನ್ನೆಲೆಯಲ್ಲಿ ಇದ್ದುಕೊಂಡು ಸಮಾಜವನ್ನು ಸರಿದಾರಿಗೆ ತರುವ, ಆಡಳಿತ ಹಾಗೂ ಜನಪ್ರತಿನಿಧಿಗಳನ್ನು ಸುಧಾರಿಸುವಂತಹ ಕೆಲಸವನ್ನು ಪತ್ರಕರ್ತರು ಪ್ರತಿಕ್ಷಣ ಮಾಡುತ್ತಿದ್ದಾರೆ. ಇದು ಅತ್ಯಂತ ಜವಾಬ್ದಾರಿಯುತ ಕೆಲಸ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷ ಪತ್ರಕರ್ತರು ಸಮಾಜದ ಮಹತ್ತರ ಹೊಣೆಗಾರಿಕೆ ಹೊತ್ತಿರುವ, ಜನರ ಧ್ವನಿಯಾಗಿ ಕೆಲಸ ಮಾಡುವ ಸೇನಾನಿಗಳು. ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾ, ಬಹಳ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ಶ್ರೀ ಜಪಾನಂದ ಜೀ ರಾಮಕೃಷ್ಣ ಸೇವಾಶ್ರಮ, ಪಾವಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net