

ರಾಮದುರ್ಗ: ನಾರದರ ಕಾಲದಿಂದ ಪ್ರಸಕ್ತ ದಿನಮಾನಗಳಲ್ಲಿಯೂ ಸಮಾಜದಲ್ಲಿ ಪತ್ರಿಕೋದ್ಯಮ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದೆ. ಇಂದಿನ ಸಾಮಾಜಿಕ ಜಾಲತಾಣ, ತಂತ್ರಜ್ಞಾನದ ಭರಾಟೆ ಮಧ್ಯೆಯೂ ಜನರಿಗೆ ನಿಖರ ಮಾಹಿತಿ ನೀಡಬಲ್ಲ ಕಾರ್ಯ ಪತ್ರಕರ್ತರಿಂದ ಆಗಬೇಕು ಎಂದು ಭಾರತ ಟಿಬೇಟ್ ಸಮನ್ವಯ ಕೇಂದ್ರದ ಸಹ ಸಂಯೋಜಕ ಅಮೃತ ಜೋಶಿ ಹೇಳಿದರು.
ಪಟ್ಟಣದ ಸ್ಟೇಟ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಭಾ ಭವನದಲ್ಲಿ ಬೆಳಗಾವಿಯ ಜನಕಲ್ಯಾಣ ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡಿದ್ದ ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನ ಕಲ್ಯಾಣ ಟ್ರಸ್ಟ್ ನಿರ್ದೇಶಕ ಪರಮೇಶ್ವರ ಹೆಗಡೆ ಮಾತನಾಡಿ, ಸ್ವಾರ್ಥ ರಹಿತವಾಗಿ ನಾರದ ಮುನಿಗಳು ಅಂದು ಲೋಕ ಕಲ್ಯಾಣಕ್ಕಾಗಿ ಸುದ್ದಿ ಪ್ರಸಾರ ಮಾಡುವ ಮೂಲಕ ತ್ರಿಲೋಕದ ಅಂಕು&ಡೊಂಕು ತಿದ್ದುವ ಕೆಲಸ ಮಾಡಿದ್ದರು. ಪತ್ರಕರ್ತರು ಹಾಗೂ ಮಾಧ್ಯಮಗಳು ವಸ್ತು ನಿಷ್ಠ ವರದಿಗಳಿಗೆ ಆದ್ಯತೆ ನೀಡಬೇಕು ಎಂದರು.
ಪ್ರೆಸ್ಕ್ಲಬ್ ಅಧ್ಯ ಮಲ್ಲಿಕಾರ್ಜುನ ದೂಪದ ಮಾತನಾಡಿದರು. ನಿವೃತ್ತ ಉಪನ್ಯಾಸಕ ವಿ.ಎನ್.ಗೋಡಖಿಂಡಿ, ಪ್ರೊ.ಎಸ್.ವಿ.ಕುಲಕರ್ಣಿ, ಪ್ರೊ.ಎಸ್.ವಿ.ಹೊನ್ನುಂಗರ ಇತರರಿದ್ದರು. ಚೇತನ ದೊಡ್ಡಮನಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಬಾವಿಕಟ್ಟಿ ಸ್ವಾಗತಿಸಿದರು. ಸಂಗಮೇಶ ಉದಪುಡಿ ನಿರೂಪಿಸಿದರು. ಅರುಣ ಹೊಸಮಠ ವಂದಿಸಿದರು.