ಕುಲಾಂತರಿ ತಳಿಯ ಆಹಾರ ತಿರಸ್ಕರಿಸುವ ಹೋರಾಟದಲ್ಲಿ ಪಾಲ್ಗೊಳ್ಳಿ

Published on

ಮದ್ದೂರು: ಕುಲಾಂತರಿ ಬೀಜ ಹಾಗೂ ತಳಿ ಆಹಾರಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸತ್ಯಾಗ್ರಹದಲ್ಲಿ ಭಾಗವಹಿಸಲು ಬಯಲುಸೀಮೆ ಬೆಳೆಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್.ಪಿ.ಶಂಕರಯ್ಯ ತಿಳಿಸಿದ್ದಾರೆ.

ತುಮಕೂರಿನ ಹೊನ್ನುಡುಕೆ ಹ್ಯಾಂಡ್‌ಪೋಸ್ಟ್ ಸಮೀಪವಿರುವ ಗಾಂಧಿ ಸಹಜ ಬೇಸಾಯ ಆಶ್ರಮ ದೊಡ್ಡಹೊಸೂರು ಗ್ರಾಮದಲ್ಲಿ ವಿಚಾರ ಸಂಕಿರಣ ಸೆ.29, 30 ಹಾಗೂ ಅಕ್ಟೋಬರ್ 1 ಮತ್ತು 2ನೇ ತಾರೀಖಿನಂದು ನಡೆಯಲಿದ್ದು. ಈ ವಿಚಾರ ಸಂಕಿರಣದಲ್ಲಿ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳ ಕುರಿತು ಮತ್ತು ಪಂಚಾಯಿತಿ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಮುಂದುವರಿಸುವ ಕಾರ್ಯತಂತ್ರಗಳ ಕುರಿತು ಗೋಷ್ಠಿಗಳು ನಡೆಯಲಿದ್ದು, ರಾಜ್ಯಾದ್ಯಂತ ಕುಲಾಂತರಿ ತಳಿ ವಿರೋಧಿಸಲು ಪ್ರಗತಿಪರರು ಸುಸ್ಥಿರ ಕೃಷಿ ಬಯಸುವವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಲೂಕಿನಿಂದಲೂ ಸೆ.29ರಂದು ಬಯಲು ಸೀಮೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ದೊಡ್ಡ ಹೊಸೂರಿನಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾದ್ಯಂತ ರೈತರು, ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.

ಕುಲಾಂತರಿ ಆಹಾರಗಳು ದೇಶ ಪ್ರವೇಶಿಸುವುದನ್ನು ತಿರಸ್ಕರಿಸುವ ಸತ್ಯಾಗ್ರಹದಲ್ಲಿ ಎಲ್ಲ ವಿಚಾರವಂತರು, ಪ್ರಗತಿಪರರು, ರೈತರು, ದ್ಯಾರ್ಥಿಗಳು ಹಾಗೂ ಸಂಘ, ಸಂಸ್ಥೆಯವರು ಭಾಗವಹಿಸುವ ಮೂಲಕ ಕುಲಾಂತರಿ ಆಹಾರ ತಿರಸ್ಕರಿಸುವ ಜತೆಗೆ ಸುಸ್ಥಿರ ಮತ್ತು ಸಮರ್ಥನೀಯವಾದ ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣವುಳ್ಳ ಸಹಜ ಬೇಸಾಯ ಸಾವಯವ ಕೃಷಿ ಪದ್ಧತಿಗಳ ಮೂಲಕ ನಮ್ಮ ಭವಿಷ್ಯವನ್ನು ಮರು ಹುಟ್ಟು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net