

ಕಂಪ್ಲಿ: ಕ್ಷಯಮುಕ್ತ ಭಾರತವನ್ನಾಗಿಸಲು ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ವೈದ್ಯಾಧಿಕಾರಿ ಡಾ.ರೇವಣಸಿದ್ಧ ಕೋರಿ ಹೇಳಿದರು.
ತಾಲೂಕಿನ ಉಪ್ಪಾರಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಆಯುಷ್ಮಾನ್‌ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯ ರೋಗಿಗಳನ್ನು ದತ್ತು ಪಡೆದು ನಿರಂತರ ಆರು ತಿಂಗಳು ಪೌಷ್ಠಿಕಾಂಶ ಆಹಾರ ಒದಗಿಸಬೇಕು. ಸೆ.17ರಿಂದ ಅ.2ರವರೆಗೆ ಆಯುಷ್ಮಾನ್‌ಭವ ಅಭಿಯಾನ ಜರುಗಲಿದ್ದು, ರಕ್ತದಾನ, ಅಂಗಾಂಗ ದಾನ ಶಿಬಿರದ ಬಗ್ಗೆ ಜಾಗೃತಿ ಮೂಡಿಸಲಾಗುವುದು.
ಇದನ್ನೂ ಓದಿ: ಕ್ಷಯಮುಕ್ತ ಭಾರತವಾಗಿಸಲು ಕೈಜೋಡಿಸಿ
ಮೆಟ್ರಿ ಗ್ರಾಮದಲ್ಲಿ ಸೆ.24ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಿದ್ದು, ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದರು.100 ಫಲಾನುಭವಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ನೇತ್ರದಾನಕ್ಕೆ ಮೂವರು ಹೆಸರನ್ನು ನೋಂದಾಯಿಸಿಕೊಳ್ಳಲಾಯಿತು. ಗ್ರಾಪಂ ಅಧ್ಯಕ್ಷೆ ಎಚ್.ಹೊನ್ನೂರಮ್ಮ, ಸದಸ್ಯ ಅಂಗಡಿ ನಾಗರಾಜ, ಪ್ರಮುಖರಾದ ಹನುಮನಗೌಡ, ಮಾಯಪ್ಪ, ಆರೋಗ್ಯ ಸಿಬ್ಬಂದಿ ಯರ‌್ರಿಸ್ವಾಮಿ, ಎ.ಈರಣ್ಣ, ಆಶಾ ಅಂಗನವಾಡಿ ಕಾರ್ಯಕರ್ತೆಯರಿದ್ದರು.
ನೆಲ್ಲೂಡಿ ಕೊಟ್ಟಾಲ್: ತಾಲೂಕಿನ ನೆಲ್ಲೂಡಿ ಕೊಟ್ಟಾಲ್ ಗ್ರಾಮದಲ್ಲಿ ಆಯುಷ್ಮಾನ್‌ಭವ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಡಾ.ಮಹಮ್ಮದ್ ಫಾರೂಕ್, ಸಿಬ್ಬಂದಿ ಬಸವನಗೌಡ, ಕೃಷ್ಣಮೂರ್ತಿ, ಗೀತಾ, ನಂದಾ, ಸಿಎಚ್‌ಒ ಸುಧಾ, ಹನುಮಂತಪ್ಪ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.