More

    ಕ್ಷಯಮುಕ್ತ ಭಾರತವಾಗಿಸಲು ಕೈಜೋಡಿಸಿ

    ಸಂಡೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ 2025ರೊಳಗೆ ಕ್ಷಯಮುಕ್ತ ಭಾರತವನ್ನಾಗಿಸಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.

    ತೋರಣಗಲ್‌ನ ಚಪ್ಪರದಳ್ಳಿಯಲ್ಲಿ ಆರೋಗ್ಯ ಇಲಾಖೆ, ಕೆಎಚ್‌ಪಿಟಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಷಯ ರೋಗ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಎದೆ ನೋವು, ಕೆಮ್ಮು, ಸಂಜೆ ಜ್ವರ, ಬೆವರು, ಹಸಿವು ಆಗದಿರುವುದು, ತೂಕ ಕಡಿಮೆಯಾಗುವ ಲಕ್ಷಣಗಳು ಕಂಡುಬಂದರೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

    ಕ್ಷಯ ರೋಗಿಗಳಿಗೆ ಆರು ತಿಂಗಳು ಉಚಿತ ಚಿಕಿತ್ಸೆ ಜತೆಗೆ 500 ರೂ. ಸಹಾಯ ಧನ ನೀಡಲಾಗುತ್ತದೆ ಎಂದರು. ಕೆಎಚ್‌ಪಿಟಿ ಮೇಲ್ವಿಚಾರಕಿ ಆಶಾ, ಸ್ವಯಂ ಸೇವಕಿ ಉಮಾದೇವಿ, ವಿನೋದಾ, ಕುಮಾರಿ, ಸ್ಥಳೀಯರಾದ ಲಕ್ಷ್ಮೀ, ಈರಮ್ಮ, ರಾಧಾ, ಉಷಾ, ಹನುಮಂತಮ್ಮ, ಮಹೇಶ್ವರಿ, ಹುಲಿಗೆಮ್ಮ, ಜಹೀದಾ, ರಾಜೇಶ್ವರಿ, ಸಾವಿತ್ರಿ, ಗೌರಮ್ಮ, ಮಾಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts