

ಹಾರೋಹಳ್ಳಿ: ಅಖಂಡ ಭಾರತವಿದ್ದ ನಮ್ಮ ದೇಶ ಸ್ವಾತಂತ್ರ$್ಯ ನಂತರ ಇಬ್ಭಾಗವಾಗಿ ದೇಶದಲ್ಲಿ ಅಶಾಂತಿ ನೆಲೆಸುವಂತಾಯಿತು ಎಂದು ಬಜರಂಗದಳದ ಜಿಲ್ಲಾ ಸಂಯೋಜಕ ರಮೇಶ್ ನಾಯಕ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿ, ದೇಶದಲ್ಲಿ ಲವ್ ಜಿಹಾದ್, ಭೂಮಿ ಜಿಹಾದ್, ಧರ್ಮ ಜಿಹಾದ್ ಸೇರಿದಂತೆ ಹಿಂದು ಧರ್ಮದ ಮೇಲೆ ದಾಳಿ ನಡೆಯುತ್ತಿದೆ. ನಾವೆಲ್ಲರೂ ಅದನ್ನು ತಡೆಗಟ್ಟಿ ಅಖಂಡ ಭಾರತ ನಿರ್ಮಾಣಕ್ಕೆ ಒಗ್ಗಟ್ಟಾಗಬೇಕು ಎಂದು ಹೇಳಿದರು.
ಬಾಂಗ್ಲಾ, ನೇಪಾಳ, ಪಾಕಿಸ್ತಾನ, ಟಿಬೆಟ್, ಅಫ್ಘಾನಿಸ್ತಾನ, ಮಯನ್ಮಾರ್, ಶ್ರೀಲಂಕಾ ಇವೆಲ್ಲವೂ ಅಖಂಡ ಭಾರತದಲ್ಲಿ ಒಗ್ಗೂಡಿದ್ದವು. ಆದರೆ ಷಡ್ಯಂತ್ರದಿಂದ ಇವೆಲ್ಲವೂ ಬೇರೆಯಾಗಿದೆ. ಅಖಂಡ ಭಾರತದತ್ತ ನಾವು ಹೆಜ್ಜೆ ಇಡಬೇಕಿದೆ. ಸನಾತನ ಹಿಂದು ಧರ್ಮವನ್ನು ಕಾಪಾಡಬೇಕಾಗಿದೆ ಎಂದರು.
ಯೋಜನಾ ಪ್ರಾಧಿಕಾರದ ಮಾಜಿ ಅಧ್ಯ ಎಚ್.ಎಸ್.ಮುರಳೀಧರ್ ಮಾತನಾಡಿ, ದೇಶದ ಒಳಗಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕಿದೆ. ಹಿಂದು ಧರ್ಮದ ವಿರುದ್ಧ ಕತ್ತಿ ಮಸೆಯುತ್ತಿರುವ ಉಗ್ರವಾದವನ್ನು ತೆಗೆದು ಹಾಕಬೇಕಿದೆ. ಧರ್ಮರಣೆಗಾಗಿ ಹಾಗೂ ದೇಶ ರಣೆಗಾಗಿ ನಾವೆಲ್ಲರೂ ಸದಾ ಸಿದ್ಧರಾಗಿರಬೇಕು ಎಂದರು.
ವಿವಿಧತೆಯಲ್ಲಿ ಏಕತೆಯನ್ನು ನೋಡುವ ದೇಶ ನಮ್ಮದಾಗಿದ್ದು, ದೇಶದ ಉಳಿವಿಗಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ, ಶಾಂತಿ ಸ್ಥಾಪನೆ ಮಾಡಲು ಕೈ ಜೋಡಿಸಬೇಕಿದೆ ಎಂದರು.
ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ನ ನಾಗರಾಜು, ಶ್ರೀನಿವಾಸ್, ಮಧುಸೂದನ್ ಶೆಟ್ಟಿ, ಲಕ್ಷಿ$್ಮಕಾಂತ್, ಪ್ರತಾಪ್, ಗಣೇಶ್, ವಾನರಯೋಧ ನಾಗರಾಜು ಇತರರು ಇದ್ದರು.