

ರಾವಂದೂರು: ಪೋಲಿಯೋ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಸಚಿವ ಕೆ ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ದೊಡ್ಡ ಬೇಲಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಯಾವುದೇ ರೀತಿಯ ಅಂಗವೈಕಲ್ಯ ಹಾಗೂ ಬುದ್ಧಿಮಾಂದ್ಯರಾಗದಂತೆ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪಲ್ಸ್ ಪೋಲಿಯೋ ಅತ್ಯಗತ್ಯವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿಟಿಎಚ್ ಸ್ವಾಮಿ , ಗ್ರಾಪಂ ಅಧ್ಯಕ್ಷೆ ಅನಿತಾ, ತಹಸೀಲ್ದಾರ್ ಕುಂಞ ಅಹಮದ್, ಇ.ಒ ಸುನೀಲ್, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಡಾ. ಶಿವಾನಂದ್, ಡಾಕ್ಟರ್ ಸೋಮಯ್ಯ ಇತರರು ಇದ್ದರು.