ಅದ್ದೂರಿಯಿಂದ ನಡೆದ ಜೋಡು ಅಡ್ಡಪಲ್ಲಕ್ಕಿ ಉತ್ಸವ

Jodu Adpadalakki Utsav held in grandeur
ಢವಳಗಿ ಗ್ರಾಮದಲ್ಲಿ ಡಾ. ಸಿದ್ಧಲಿಂಗ ಶಿವಾಚಾರ್ಯರ ಜೋಡು ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
Published on

ಢವಳಗಿ: ಗ್ರಾಮದ ಮಡಿವಾಳೇಶ್ವರರ 517ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಡಿವಾಳೇಶ್ವರರ ಉಚಿತ ಪ್ರಸಾದ ನಿಲಯದಿಂದ ಮಡಿವಾಳೇಶ್ವರರ ದೇವಸ್ಥಾನದವರೆಗೆ ಶ್ರೀಮದ್ಧ ಉಜ್ಜಯಿನಿ ಸದ್ಧರ್ಮ ಮಹಾಸಿಂಹಾಸನಾಧೀಶ್ವರ ಜಗದ್ಗುರು ಡಾ. ಸಿದ್ಧಲಿಂಗ ಶಿವಾಚಾರ್ಯರ ಅದ್ದೂರಿ ಜೋಡು ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಸೋಮವಾರ ನಡೆಯಿತು.

ಗ್ರಾಮದ ಮಹಿಳೆಯರು ಕುಂಭ- ಕಲಶ, ಹೊತ್ತು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಢವಳಗಿಯ ಘನಮಠೇಶ್ವರ ಸ್ವಾಮೀಜಿ, ಮರಿ ದೇವರಾದ ಜಯಸೂರ್ಯ ಗದ್ದುಗೆಮಠ ಉತ್ಸವಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net