

ತುಮಕೂರು: ಒಕ್ಲಲಿಗ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್ ಸಹಯೋಗದಲ್ಲಿ ಉದ್ಯೋಗಮೇಳವನ್ನು ನಗರದ ಸಿದ್ದಗಂಗಾ ಪಾಲಿಟೆಕ್ನಿಕ್‌ನಲ್ಲಿ ಜ.28ರಂದು ಬೆಳಗ್ಗೆ 10 ರಿಂದ 5 ರವರೆಗೆ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯವಹಿಸಲಿದ್ದು ಇಸ್ಕಾನ್ ಉಪಾಧ್ಯಕ್ಷ ಭಕ್ತ ನಂದನಂದನ ಪ್ರಭು ಉದ್ಘಾಟಿಸುವರು. ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅಧ್ಯಕ್ಷತೆವಹಿಸುವರು. ದಾವಣಗೆರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಕೆ.ವೆಂಕಟೇಶ್, ಸುರೇಶ ಗಟ್ಟಾಪುರ, ಲೋಕೇಶ್, ಕಿರಣ್ ಅಗ್ರಹಾರ, ಡಾ.ಶಿವಕುಮಾರಯ್ಯ, ಜಿ.ಬಿ.ವರದರಾಜು, ನಂಜೇಗೌಡನಂಜುಂಡ ಉಪಸ್ಥಿತರಿರುವರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ, ಐಟಿಐ, ಡಿಪ್ಲೊಮೊ, ಇಂಜಿನಿಯರಿಂಗ್, ಸ್ನಾತಕೋತ್ತರ, ಎನ್‌ಟಿಟಿ, ಟಿಸಿಎಚ್, ಬಿ.ಇಡಿ., ಎಂ.ಇಡಿ., ಪದವೀಧರರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೌಸ್‌ಕೀಪಿಂಗ್, ಸೇಲ್ಸ್ ಮ್ಯಾನ್ ನಿಂದ ಸಾಫ್ಟವೇರ್ , ಹಾರ್ಡ್‌ವೇರ್ ವರೆಗೆ ಉದ್ಯೋಗಾವಕಾಶಗಳು ಇರಲಿವೆ. ಈ ಉದ್ಯೋಗ ಮೇಳವು ಉಚಿತವಾಗಿದ್ದು ಪ್ರತೀ ಅಭ್ಯರ್ಥಿಯು ಐದು ಸಂಸ್ಥೆಗಳ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೋಹನ್: 9686564192 ಸಂಪರ್ಕಿಸಬಹುದು.