

ಕಾರವಾರ: ಆಗಸ್ಟ್ 6 ರಂದು ನಗರದ ಕೋಡಿಬಾಗ ದಿವೇರ್ ಕಾಲೇಕ್ ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಆಯೋಜಕರು, ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ವಿವರಿಸಿ, ಪೋಸ್ಟರ್ ಬಿಡುಗಡೆ ಮಾಡಿದರು.
ದಿವೇಕರ್ ಕಾಲೇಕ್ ನ ಪ್ರಾಂಶುಪಾಲ ಡಾ.ಕೇಶವ ಕೆ.ಜಿ.,ಕಾರವಾರ ಮೂಲದ ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್ ಅವರು ಜಿಲ್ಲೆಯಲ್ಲಿ ಹಲವು ಸೇವಾ ಕಾರ್ಯ ಮಾಡುತ್ತಿದ್ದು, ಅವರೇ ಈ ಉದ್ಯೋಗ ಮೇಳದ ಪ್ರಾಯೋಜಕರಾಗಿದ್ದಾರೆ. ಜಿಲ್ಲೆಯಲ್ಲಿ ಎರಡು ಉದ್ಯೋಗ ಮೇಳ ಆಯೋಜಿಸಲು ನಿರ್ಣಯಿಸಲಾಗಿದೆ. ಮೊದಲ ಹಂತದಲ್ಲಿ ಕಾರವಾರದಲ್ಲಿ ನಡೆಯಲಿದೆ ಎಂದರು.
ಮೆರಿಟ್ಯೂಟ್ಸ್ ಡೆವಲಪ್ ಮೆಂಟ್ ಪ್ರೈ.ಲಿ.ನ ಸಂಸ್ಥಾಪಕ, ಫಯಾಜ್ ಅಹ್ಮದ್ ಮಾತನಾಡಿ
ಈಗಾಗಲೇ ಮುಂಬೈ, ಹುಬ್ಬಳ್ಳಿ, ಧಾರವಾಡ, ಪುಣೆ, ಗೋವಾ, ಬೆಂಗಳೂರಿನಿಂದ ರಿಲಾಯನ್ಸ್, ಟಾಟಾ ಮಾರ್ಕೊಪೋಲೋ ಮುಂತಾದ ಪ್ರತಿಷ್ಠಿತ 35 ಕಂಪನಿಗಳು ಆಗಮಿಸಲಿವೆ.
ಈಗಾಗಲೇ 1 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಎಸ್ ಎಸ್ ಎಲ್ ಸಿ ಮೇಲ್ಪಟ್ಟು ಪಿಜಿವರೆಗಿನ ಎಲ್ಲ ರೀತಿಯ ಅಭ್ಯರ್ಥಿಗಳು ಇಲ್ಲಿ ಭಾಗವಹಿಸಬಹುದು ಎಂದರು.
ಅನ್ ಲೈನ್ ನಲ್ಲಿ ವೆಬ್ ಸೈಟ್ https://karwarjf.meritude.in/ ನಲ್ಲಿ ನೋದಣಿ ಮಾಡಿಕೊಳ್ಳಬಹುದು, ಅಲ್ಲದೇ, ನೇರವಾಗಿಯೂ ಸ್ಥಳದಲ್ಲೇ ನೋಂದಣಿ ಮಾಡಬಹುದು, ಇದಕ್ಕೆ ಯಾವುದೇ ನೋಂದಣಿ ಶುಲ್ಕವಿಲ್ಲ.
ಅಂದು ಬೆಳಗ್ಗೆ 9.30 ರಿಂದ ಸಾಯಂಕಾಲ 5.30 ರವರೆಗೆ ಮೇಳಕ್ಕೆ ಹಾಜರಾಗಬಹುದು.
ಮೊದಲು ನಾವು ಅಭ್ಯರ್ಥಿಗಳ ವೈಯಕ್ತಿಕ ದಾಖಲೆ ಪರಿಶೀಲಿಸಿ ಅದಕ್ಕೆ ಹೊಂದಿಕೆಯಾಗುವ ಕಂಪನಿಗಳಿಗೆ ಸಂದರ್ಶನಕ್ಕೆ ಕಳಿಸಲಾಗುವುದು ಎಂದರು.
ಇದನ್ನೂ ಓದಿ:ಅಮೆರಿಕದ ಟಿ20 ಕ್ರಿಕೆಟ್ ಟೂರ್ನಿ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಎಂಐ ನ್ಯೂಯಾರ್ಕ್
ಬೃಹತ್ ಉದ್ಯೋಗ ಮೇಳದ ನಿರ್ವಾಹಕ ನಾಗರಾಜ ಮಡಿವಾಳ, ಕೆನರಾ ವೆಲ್ ಫೇರ್ ಟ್ರಸ್ಟ್ ನ ಕೃಷ್ಣಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.