

ಬೆಂಗಳೂರು: ಅಂಗವಿಕಲರ ವಿಶೇಷ ಉದ್ಯೋಗ ವಿನಿಮಯ ಕೇಂದ್ರ ಮತ್ತು ಯೂಥ್ 4 ಜಾಬ್ಸ್, ಬೆಂಗಳೂರು ಸಹಯೋಗದಲ್ಲಿ ವಿಶೇಷ ಚೇತನ ಅಭ್ಯರ್ಥಿಗಳಿಗಾಗಿ ಜು. 29 ರಂದು ಬೆಳಿಗ್ಗೆ 10.00 ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೇಳದಲ್ಲಿ 15ಕ್ಕೂ ಅಧಿಕ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಖಾಲಿ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು.
ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅನುತ್ತೀರ್ಣ/ಪಿ.ಯು.ಸಿ/ಪದವಿ ಮತ್ತು ಇತರೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಬಯೋಡೇಟಾ, ಯು.ಡಿ.ಐ.ಡಿ ದಾಖಲೆ ಮತ್ತು ಇತ್ತೀಚಿನ ಭಾವಚಿತ್ರಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಮೇಳ ನಡೆಯುವ ಸ್ಥಳ: ಅಂಗವಿಕಲರ ವಿಶೇಷ ಉದ್ಯೋಗ ವಿನಿಮಯ ಕಛೇರಿ, ಸಿ.ಓ.ಇ. ಕಟ್ಟಡ , ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಆವರಣ, ತುಮಕೂರು ರಸ್ತೆ (ಮಾಡ್ರನ್ ಬ್ರೆಡ್ ಪ್ಯಾಕ್ಟರಿ ಹತ್ತಿರ), ಬೆಂಗಳೂರು-560022.