ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಪ್ರಯುಕ್ತ ಸಜೀಪಮೂಡ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರದಲ್ಲಿ ಜ್ಞಾನ ಭಂಡಾರ ಗ್ರಂಥಾಲಯ ಉದ್ಘಾಟನೆ ನಡೆಯಿತು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಸಂಜೀವ ಪೂಜಾರಿ ಗ್ರಂಥಾಲಯ ಲೋಕಾರ್ಪಣೆಗೊಳಿಸಿದರು. ಜಯಶಂಕರ್ ಕಾನ್ಸಲೆ ಅವರ ಸಾಹಿತ್ಯ ಮತ್ತು ಗಾಯನದ ಗುರು ನಾಮ ಸ್ಮರಣೆ ಗುರು ಸ್ತುತಿ ಎಂಬ ಭಕ್ತಿಗೀತೆಯನ್ನು ಸಂಜೀವ ಪೂಜಾರಿ ಸುಭಾಷ್ ನಗರ ಬಿಡುಗಡೆ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ರಮೇಶ್ ಅನ್ನಪ್ಪಾಡಿ ಭಕ್ತಿಗೀತೆಗೆ ಚಾಲನೆ ನೀಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ವೆಂಕಟೇಶ್ ಶಾಂತಿ ನರಿಕೊಂಬು, ಸಂತೋಷ್ ಕುಮಾರ್ ಕುಚ್ಚಿಗುಡ್ಡೆ, ಜಯಶಂಕರ್ ಕಾನ್ಸಲೆ, ಕಾರ್ಯದರ್ಶಿ ಅಶ್ವಿನ್ ಪೂಜಾರಿ ಕಾರಾಜೆ, ಭಜನಾ ಅಧ್ಯಕ್ಷ ಲೋಕೇಶ್ ಗುರುಮಂದಿರ, ಪ್ರವೀಣ್, ರಂಜಿತ್ ಗುರು ಮಂದಿರ, ರಾಜೇಶ್ ಕೋಟ್ಯಾನ್ ಶಾಂತಿನಗರ, ಹರೀಶ್ ಕೋಟ್ಯಾನ್ ಕುದನೆ, ಪ್ರೇಮನಾಥ್ ಕರ್ಕೇರ ಬಂಟ್ವಾಳ, ರಾಕೇಶ್ ಕೋಟ್ಯಾನ್ ಕೊಳಕೆ, ರಾಕೇಶ್ ಪೂಜಾರಿ, ವಿಜಯ ಪೂಜಾರಿ ಗುರು ಮಂದಿರ, ಉಪಾಧ್ಯಕ್ಷ ತಿಲಕರ ಪೂಜಾರಿ ಮಿತ್ತಕರೆ, ಮೋಹನದಾಸ್ ಪೂಜಾರಿ ಬೊಳ್ಳಾಯಿ ಉಪಸ್ಥಿತರಿದ್ದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.