

ಕಾಸರಗೋಡು: ಕೂಡ್ಲುಪಾಯಿಚ್ಚಾಲ್ ನಿವಾಸಿ ರಮೇಶ್-ಲೀಲಾ ದಂಪತಿ ಪುತ್ರ ವಿನಯ(27)ಎಂಬುವರ ಮೃತದೇಹ ಚಂದ್ರಗಿರಿ ಹೊಳೆಯಲ್ಲಿ ಪತ್ತೆಯಾಗಿದೆ. ನೆಲ್ಲಿಕಟ್ಟೆ ಸನಿಹದ ಪಾಂಬಾಚಿಕಡವು ನಿವಾಸಿ, ಪಿಗ್ಮಿ ಏಜೆಂಟ್ ರಮೇಶನ್ ಬಿ.ಎ. ಎಂಬುವರ ಮೃತದೇಹಕ್ಕಾಗಿ ಹುಡುಕಾಟ ನಡೆಸುವ ಮಧ್ಯೆ ವಿನಯ ಅವರ ಮೃತದೇಹ ಪತ್ತೆಯಾಗಿದೆ. ವಿನಯ ಅವರು ಆ.10ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಹುಡುಕಾಟ ನಡೆಸುವ ಮಧ್ಯೆ ಮೃತದೇಹ ಪತ್ತೆಯಾಗಿದೆ.