ಮುನ್ನೂರ ಸಮಾಜದಿಂದ ಪ್ರತಿಭಾ ಪುರಸ್ಕಾರ ನಿವೃತ್ತ ನೌಕರರಿಗೆ ಸನ್ಮಾನ

IMG-20230925-WA0000
Published on

ಜಿಲ್ಲಾ ಮುನ್ನೂರುರೆಡ್ಡಿ ಸಮಾಜ ಸಂಘದ ವಾರ್ಷಿಕ ಮಹಾಸಭೆ | ಮುತ್ತೈದೆಯರಿಗೆ ಉಡಿ ತುಂಬಿ ಗೌರವ : ಸಂಭ್ರಮಿಸಿದ ಮಕ್ಕಳು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲಾ ಮುನ್ನೂರುರೆಡ್ಡಿ ಸಮಾಜ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಹಾಗೂ ಸಂಘದ ವಾರ್ಷಿಕ ಮಹಾಸಭೆಯು ನಗರದ ಜೇವರ್ಗಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಭಾಭವನದಲ್ಲಿ  ಬಿದ್ದಾಪುರ ಕಾಲನಿಯ ಅಕ್ಕಮಹಾದೇವಿ  ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಸಾನಿಧ್ಯದಲ್ಲಿ ಜರುಗಿತು.
ಸಮಾರಂಭದಲ್ಲಿ  ಸೇವೆಯಿಂದ ನಿವೃತ್ತರಾದವರಿಗೆ ಗೌರವಿಸಲಾಯಿತು.ಜಗದೀಶರೆಡ್ಡಿ ಹಳ್ಳದಮನಿ  ಅವರ  ತಂದೆಯ ಸ್ಮರಣಾರ್ಥ ಕೊಡಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಸಂಘದಿAದ ಕಳೆದ ೨೮ರಂದು ಆಯೋಜಿಸಿದ್ದ  ರಂಗೋಲಿ, ಮ್ಯೂಸಿಕಲ್ ಚೇರ್ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ  ಬಹುಮಾನ ವಿತರಿಸಲಾಯಿತು. ಇನ್ನೂರಕ್ಕೂ ಹೆಚ್ಚು ಮುತ್ತೆÊö್ತದೆಯರಿಗೆ ಉಡಿ ತುಂಬಲಾಯಿತು. ನಿರೀಕ್ಷೆ ಮೀರಿ ಸಮಾಜದ ಮಹಿಳೆಯರು, ಹಿರಿಯರು, ಮಕ್ಕಳು ಪಾಲ್ಗೊಂಡು  ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೇಡಂ ತಾಲೂಕು ಮುನ್ನೂರ ಸಮಾಜ ಗೌರವಾಧ್ಯಕ್ಷ ನಾಗಿರೆಡ್ಡಿ ಮುನ್ನೂರ,ನ್ಯಾಯವಾದಿ ಲಕ್ಷಿö್ಮÃ ನಾಗೇಶರೆಡ್ಡಿ ದೇಗಲಮಡಿ, ಸಮಾಜದ ಅಧ್ಯಕ್ಷ ರಾಘವೇಂದ್ರ ಊಡಗಿ ಭಾಗವಹಿಸಿದ್ದರು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉತ್ತಮ ಶಿಕ್ಷಕ ಎಂದು ಪ್ರಶಸ್ತಿಗೆ ಭಾಜನರಾದ ಖ್ಯಾತ ಮಕ್ಕಳ ತಜ್ಞ ಹಾಗೂ ಸಂಘದ ಗೌರವಾಧ್ಯಕ್ಷ ಡಾ. ನಾಗನಾಥ ಗಚ್ಚಿನಮನಿ, ಪ್ರಧಾನ ಕಾರ್ಯದರ್ಶಿ ಪ್ರೊ.ಸೀತಾರಾಮ ಮುನ್ನೂರ,್ತ ಪತ್ರಕರ್ತ ಪ್ರವೀಣರೆಡ್ಡಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಾಸುದೇವ ಪಾಟೀಲ ವಹಿಸಿದ್ದರು.
ವಿಶೇಷ ಸನ್ಮಾನಿತಗೊಂಡ ಡಾ.ನಾಗನಾಥ ಗಚ್ಚಿನಮನಿ ಅವರು ಸಂಘದಿAದ ರಚಿಸಿದ ವಿದ್ಯಾರ್ಥಿ ವಿಕಾಸ ವೇದಿಕೆಗೆ ಒಂದು ಲಕ್ಷ ರೂ. ದೇಣಿಗೆ ಘೋಷಿಸಿದರು. ಪಶು ಇಲಾಖೆಯ ಉಪ ನಿರ್ದೇಶಕ  ಡಾ.ಸಂಜಯರೆಡ್ಡಿ ಆಳಂದ ೨೧ ಸಾ.ರೂ. ದೇಣಿಗೆ ಪ್ರಕಟಿಸಿದರು.
ಕರಾಟೆ ಪಟು ಮಾನ್ಯತಾ ಸಿದ್ದರಾಜ ಪಾಟೀಲ  ಪ್ರಾರ್ಥಿಸಿದರು. ಪ್ರೊ.ಸೀತಾರಾಮ ಮುನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರರೆಡ್ಡಿ ಗ್ವಾನ್, ಉಜ್ವಲಾ  ಗ್ವಾನ್ ಮತ್ತು  ಚಂದ್ರಕಾAತ ವೈಜಾಪುರ ನಿರೂಪಿಸಿದರು. ವಸಂತ ಕದಂಖಾನಿ ವಂದಿಸಿದರು.
ಜಿಲ್ಲಾ ಮುನ್ನೂರುರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿ, ಪ್ರಮುಖರಾದ ಬಾಲರೆಡ್ಡಿ ಮುನ್ನೂರ,ಪದ್ಮಾಕರ ಗಚ್ಚಿನಮನಿ, ರವೀಂದ್ರಕುಮಾರ ಮೊಕಾಶಿ, ರವೀಂದ್ರಕುಮಾರ,ಆನAದರೆಡ್ಡಿ ವಡಗೇರಿ,  ರೇವಪ್ಪ ವೈಜಾಪುರ, ಸುಶೀಲಕುಮಾರ ಗೊಬ್ಬೂರಕರ, ಅಶ್ವಿನರೆಡ್ಡಿ ಶಹಾಪುರ, ಸಂತೋಷಕುಮಾರ ಮೊಟ್ನಳ್ಳಿ, ಓಂಪ್ರಕಾಶ ಗಂವಾರ, ಪ್ರಕಾಶರೆಡ್ಡಿ ಹಳ್ಳದಮನಿ, ಓಂಪ್ರಕಾಶ ಮುನ್ನೂರ, ಸುರೇಶ ಹೊಕ್ರಾಣಕರ, ದತ್ತಾತ್ರೇಯ ಭೋಗನಳ್ಳಿ, ರಘುಪತಿರೆಡ್ಡಿ, ಸುಭಾಶ್ಚಂದ್ರ ಗೋಸುಲ್, ಭೂಪಾಲರೆಡ್ಡಿ, ರಾಮಚಂದ್ರ ಕದಂಖಾನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net