ದೇಶದಲ್ಲಿ ದೇವಸ್ಥಾನಗಳ ಹತ್ತಿಕ್ಕುವ ಜಿಹಾದ್

ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ಅಖಂಡ ಭಾರತ ಸಂಕಲ್ಪ ಯಾತ್ರೆ ನಿಮಿತ್ತ ಹಿಂದುಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ ನಡೆಯಿತು. ಹಿಂದು ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಆರ್‌ಎಸ್‌ಎಸ್‌ನ ಹನುಮಂತರೆಡ್ಡಿ ಮಹಲಿನಮನಿ, ಪ್ರಮುಖರಾದ ಸುರೇಶ ಕುರುಗೋಡು, ಹನುಮೇಶ ವಾಲೇಕಾರ, ಸಂಪತ್ ಕುಮಾರ, ಪ್ರಕಾಶ ಚಕ್ರಸಾಲಿ ಇತರರಿದ್ದರು.
ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ಅಖಂಡ ಭಾರತ ಸಂಕಲ್ಪ ಯಾತ್ರೆ ನಿಮಿತ್ತ ಹಿಂದುಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ ನಡೆಯಿತು. ಹಿಂದು ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಆರ್‌ಎಸ್‌ಎಸ್‌ನ ಹನುಮಂತರೆಡ್ಡಿ ಮಹಲಿನಮನಿ, ಪ್ರಮುಖರಾದ ಸುರೇಶ ಕುರುಗೋಡು, ಹನುಮೇಶ ವಾಲೇಕಾರ, ಸಂಪತ್ ಕುಮಾರ, ಪ್ರಕಾಶ ಚಕ್ರಸಾಲಿ ಇತರರಿದ್ದರು.
Published on

ಕನಕಗಿರಿ: ಲವ್‌ಜಿಹಾದ್, ಲ್ಯಾಂಡ್ ಜಿಹಾದ್ ಬಳಿಕ ದೇಶದಲ್ಲಿ ದೇವಸ್ಥಾನಗಳ ಹತ್ತಿಕ್ಕುವ ಜಿಹಾದ್ ಹುಟ್ಟಿಕೊಂಡಿದೆ ಎಂದು ಹಿಂದು ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಆರೋಪಿಸಿದರು.

ನಗರದ ವಾಲ್ಮೀಕಿ ವೃತ್ತದಲ್ಲಿ ಗುರುವಾರ ಅಖಂಡ ಭಾರತ ಸಂಕಲ್ಪ ಯಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಹೇಳಿದ ಮುಖವಾಡ ಧರಿಸಿದ ಅನಾಮಿಕನ ಮಾತಿಗೆ ಎಸ್‌ಐಟಿ ರಚಿಸಿರುವುದೇ ದೊಡ್ಡ ದುರಂತ. 13 ಕಡೆಗಳಲ್ಲಿ ಗುಂಡಿ ಅಗೆದರು ಒಂದು ಅಸ್ಥಿಪಂಜರ, ಬುರುಡೆಗಳು ಸಿಕ್ಕಿಲ್ಲ. ಇದೊಂದು ವ್ಯವಸ್ಥಿತ ಪಿತೂರಿಯಾಗಿದ್ದು, ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಅಗೆಯುವ ಕೆಲಸ ಮುಂದುವರಿದಿದೆ. ಹಿಂದು ದೇವಾಲಯಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಆ ವ್ಯಕ್ತಿ ದೇವಸ್ಥಾನದ ಕೆಳಗೆ ಹೂತಿಡಲಾಗಿದೆ ಎಂದು ಹೇಳಿದರೆ ಅಲ್ಲಿಯೂ ಅಗೆಯುವುದಕ್ಕೆ ಹಿಂಜರಿಯುವುದಿಲ್ಲ. ಹಿಂದೆಯೂ ಹಿಂದು ದೇಗುಲಗಳನ್ನು ಧ್ವಂಸ ಮಾಡಿ ಬೇರೆ ಕಟ್ಟಡಗಳನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿದೆ. ಹಿಂದು ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ನಾವು ಕೇವಲ ಪಾಕಿಸ್ತಾನವನ್ನು ಕಳೆದುಕೊಂಡಿಲ್ಲ. ಅಖಂಡ ಭಾರತ 9 ದೇಶಗಳಾಗಿ ವಿಂಗಡನೆಯಾಗಿದೆ. ಟಿಬೆಟ್, ಬಾಂಗ್ಲಾ, ಅಫಘಾನಿಸ್ತಾನ, ಪಿಒಕೆ, ಚೀನಾ ಆಕ್ರಮಿತ ಪ್ರದೇಶವನ್ನು ಕಳೆದುಕೊಂಡಿದ್ದೇವೆ. ಅಖಂಡ ಭಾರತಕ್ಕಾಗಿ ಸಂಕಲ್ಪ ತೊಟ್ಟು ಪ್ರತಿ ವರ್ಷ ಆ.14ರಂದು ಯಾತ್ರೆ ನಡೆಸಲಾಗುತ್ತಿದ್ದು, ಅಖಂಡ ಭಾರತದ ಧ್ವಜ ಏರುವವರೆಗೂ ಯಾತ್ರೆ ನಿಲ್ಲುವುದಿಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ಹನುಮಂತರೆಡ್ಡಿ ಮಹಲಿನಮನಿ ಮಾತನಾಡಿದರು. ಕಲ್ಮಠದಿಂದ ವಾಲ್ಮೀಕಿ ವೃತ್ತದವರೆಗೆ ಹಿಂದು ಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಮುಖರಾದ ಸುರೇಶ ಕುರುಗೋಡು, ಹನುಮೇಶ ವಾಲೇಕಾರ, ಸಂಪತ್ ಕುಮಾರ, ಪ್ರಕಾಶ ಚಕ್ರಸಾಲಿ, ಗೋಪಾಲರೆಡ್ಡಿ ಮಹಲಿನಮನಿ, ಪೃಥ್ವಿ ಮ್ಯಾಗೇರಿ, ವಿಠ್ಠಲರೆಡ್ಡಿ ಬೇರ‌್ಗಿ, ವೆಂಕಟೇಶರೆಡ್ಡಿ ಕೆರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net