ಆನೆಗುಂದಿ ಶ್ರೀಗಳ ಚಾತುರ್ವಾಸ್ಯ ವ್ರತ ಸಂಕಲ್ಪ ಯಾತ್ರೆ

pdb
Published on

ಪಡುಬಿದ್ರಿ: ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ 21ನೇ ವರ್ಷದ ಚಾತುರ್ವಾಸ್ಯ ವ್ರತಾಚರಣೆ ಪೂರ್ವಭಾವಿಯಾಗಿ ಸಂಕಲ್ಪ ಯಾತ್ರೆ ಕೊಪ್ಪಳ ಜಿಲ್ಲೆಯ ಗಂಗಾವತಿ ಆನೆಗುಂದಿಯ ಮಹಾಸಂಸ್ಥಾನದಿಂದ ಆರಂಭಗೊಂಡಿತು. ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ಶ್ರೀಗಳ ಚಾತುರ್ವಾಸ್ಯ ವ್ರತಾಚರಣೆ ನಡೆಯಲಿದೆ. ಆನೆಗುಂದಿಯಲ್ಲಿ ನಡೆದ ಸವಾರಂಭದಲ್ಲಿ ಪಂಚಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಕೊಶಾಧಿಕಾರಿ ಸುಬ್ಬಣ್ಣಾಚಾರ್ಯ ಗಿಣಿಗೇರಿ, ಉಪಾಧ್ಯಕ್ಷ ಎಸ್.ವಿ.ವೇಣುಗೋಪಾಲ ಆಚಾರ್ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಜೆ.ಮಂಜುನಾಥ ಅಂಬಣ್ಣ, ಕಾರ್ಯದರ್ಶಿ ಮಂಜುನಾಥ ವಾಸಪ್ಪ ಬನ್ನಿಕೊಪ್ಪ, ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಕಾಳಪ್ಪ ಪತ್ತಾರ್ ಕೊಪ್ಪಳ, ಕಾರ್ಯದರ್ಶಿ ಶಿವಕುವಾರ ಕವ್ಮಾರ, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ವರ್ಣಾ ಎಸ್.ಆಚಾರ್ಯ ಗಿಣಿಗೇರಿ, ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯಶ್ರೀ ಚಿನ್ನಾಳ, ಉಪಾಧ್ಯಕ್ಷೆ ಶಾರದಮ್ಮ ಡಿ.ಬಡಿಗೇರ, ಕೋಶಾಧಿಕಾರಿ ಸ್ಮಿತಾ ಮಂಜುನಾಥ ಗಂಗಾವತಿ, ಕೃಷ್ಣ ಆಚಾರ್ಯ ಬಳ್ಳಾರಿ, ರಾಮ ಆಚಾರ್ಯ ಬಳ್ಳಾರಿ, ಸಿದ್ದೇಶ ಪುರೋಹಿತ್, ಎಂ.ಕೆ.ರವೀಂದ್ರ ಬಳ್ಳಾರಿ, ಶ್ರೀನಾಥ್ ಬಳ್ಳಾರಿ, ಮೌನೇಶ್ ಪತ್ತಾರ್ ಸಿದ್ದಾಪುರ, ಕೇಶವ ಶರ್ಮ, ಮೌನೇಶ್ ಶರ್ಮ ಪಡುಕುತ್ಯಾರು ಉಪಸ್ಥಿತರಿದ್ದರು. ಚಾತುರ್ವಾಸ್ಯ ವ್ರತನಿರ್ವಹಣಾ ಸಮಿತಿ ಪ್ರತಿನಿಧಿ ಲೋಲಾಕ್ಷ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ದೇವಸ್ಥಾನಗಳಿಗೆ ಶ್ರೀಗಳ ಭೇಟಿ

ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವಸ್ಥಾನ, ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಶ್ರೀಗಳು ಭೇಟಿ ನೀಡಿದರು. ಅಲ್ಲಿನ ಪ್ರಮುಖರು ಶ್ರೀಗಳನ್ನು ಸ್ವಾಗತಿಸಿದರು. ಸಮಿತಿ ಪ್ರಮುಖರು ಚಾತುರ್ವಾಸ್ಯ ವ್ರತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನಗಳ ಮುಖ್ಯಸ್ಥರಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net