

ಕುಂದಾಪುರ: ಉಳ್ಳೂರು ಕಂದಾವರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಕೆಸರು ಗದ್ದೆ ಕಾರ್ಯಕ್ರಮ ಕೆಸ್ರ್ ಹಚ್ಕಂಡ್ ಆಡುವ, ಒಂದ್ ಗಳ್ಗಿ ಬನ್ನಿ ಕಾಂಬ ಹುತ್ತೂರು ಮಠದ ಮಾರ್ಮಾಡಿ ಗದ್ದೆಯಲ್ಲಿ ಭಾನುವಾರ ನಡೆಯಿತು.
ಉಳ್ಳೂರು ಶ್ರೀ ಕಾರ್ತಿಕೇಯ ದೇವಸ್ಥಾನದ ಬಳಿಯಿಂದ ಕಂಬಳ ಕೋಣಗಳು ಮತ್ತು ಚಂಡೆ ವಾದನದೊಂದಿಗೆ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮತ್ತು ಕಾರ್ಯದರ್ಶಿ ಶ್ರೀಕಾಂತ ಶೇರಿಗಾರ್ ಅರಳಿಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಮತ್ತು ಜಗದೀಶ ಮೂಡ್ಲಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.