

ಕಲಬುರಗಿ: ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಬಾಟ್ಯಾ ಜೋಪಡಿಪಟ್ಟಿಯಲ್ಲಿರುವ ಕಾರ್ಮಿಕರು ಮೂಲ ಸೌಲಭ್ಯಗಳು ಇಲ್ಲದೆ, ಅನ್ನಾಹಾರವೂ ಸಿಗದೆ ಪರದಾಡುತ್ತಿದ್ದು, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರ ಮೊರೆ ಹೋಗಿದ್ದಾರೆ. ಶಾಸಕರೇ ದಯವಿಟ್ಟು ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ 200ಕ್ಕೂ ಹೆಚ್ಚು ಕಾರ್ಮಿಕರು ಅಲ್ಲಿ ಸಿಲುಕಿದ್ದು, ಕೂಲಿ ಕೆಲಸ ಮಾಡಲು ಗುಳೆ ಹೋಗಿದ್ದವರೀಗ ಪರದಾಡುವಂತಾಗಿದೆ. ತಮ್ಮನ್ನು ತಮ್ಮೂರಿಗೆ ಮುಟ್ಟಿಸುವಂತೆ ಕಾರ್ಮಿಕರು ಗೋಳಾಡತೊಗಡಿದ್ದಾರೆ. ಈ ಮೊರೆಗೆ ಶಾಸಕರ ಪ್ರತಿಕ್ರಿಯೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದ್ದು, ನಿಯಂತ್ರಣ ಮೀರಿ ಹರಡುತ್ತಿದೆ. ಹೀಗಾಗಿ ಅಲ್ಲಿ ಸಂಪೂರ್ಣ ಲಾಕ್ಡೌನ್ ಚಾಲ್ತಿಯಲ್ಲಿದ್ದು ಹೊರ ರಾಜ್ಯದ ಜನರ ಜೀವನ ದುಸ್ತರವಾಗಿದೆ.