

ಹೆಬ್ರಿ: ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕ ವತಿಯಿಂದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು.
ಕ್ರೀಡಾ ಭಾರತಿಯ ಕಲ್ಪನೆಯಂತೆ ಹಿಂದು ಮಹಾ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾ ಮಾತೆಯ ಹೆಸರಿನಲ್ಲಿ ನೀಡುವ ಜೀಜಾ ಮಾತಾ ಪುರಸ್ಕಾರವನ್ನು ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಪದಕದೊಂದಿಗೆ, ಅಥ್ಲೆಟಿಕ್ ವಿಭಾಗದಲ್ಲಿ ಅನೇಕ ಪ್ರಶಸ್ತಿ ಪಡೆದ ಕ್ರೀಡಾ ಸಾಧಕ ವಿಖ್ಯಾತ ಶೆಟ್ಟಿ ಅವರ ತಾಯಿ ಗೀತಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಅಂತಾರಾಷ್ಟ್ರೀಯ ಕ್ರೀಡಾಪಟು ಪೆರ್ಡೂರು ಪದ್ಮನಾಭ ಭಂಡಿ, ಅಮೃತ ಭಾರತಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಪೈ, ಅಮೃತ ಭಾರತಿ ವಿದ್ಯಾಲಯ ಅಧ್ಯಕ್ಷ ಶೈಲೇಶ್ ಕಿಣಿ, ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಕ್ರೀಡಾ ಭಾರತಿ ವಿಭಾಗ ಪ್ರಮುಖ್ ಪ್ರಸನ್ನ ಶೆಣೈ, ಜಿಲ್ಲಾ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಬೈಲೂರು, ಹೆಬ್ರಿ ತಾಲೂಕು ಕ್ರೀಡಾ ಭಾರತಿ ಅಧ್ಯಕ್ಷ ಸೀತಾನದಿ ವಿಠ್ಠಲ್ ಶೆಟ್ಟಿ, ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ಕ್ರೀಡಾಪಟು ವಿಖ್ಯಾತ ಶೆಟ್ಟಿ ಉಪಸ್ಥಿತರಿದ್ದರು.