ಜೆಇಇ ಅಡ್ವಾನ್ಸ್: ಉಜ್ವಲ್ ಎಲ್. ಶಂಕರ್ ರಾಜ್ಯಕ್ಕೆ ಪ್ರಥಮ

Ujwal
Published on

ಬೆಂಗಳೂರು: ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಕ್ಕೆ ನಡೆಸುವ ಜೆಇಇ ಅಡ್ವಾನ್ಸ್ ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬೆಂಗಳೂರಿನ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಉಜ್ವಲ್ ಎಲ್. ಶಂಕರ್ ಅಖಿಲ ಭಾರತೀಯ ಮಟ್ಟದಲ್ಲಿ 11ನೇ ರ‌್ಯಾಂಕ್‌ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಟಾಪರ್ ಆಗಿದ್ದಾನೆ.

ಈ ವಿದ್ಯಾರ್ಥಿಯು ಕರ್ನಾಟಕದ ಸಿಇಟಿಯಲ್ಲಿ ಇಂಜಿನಿಯರಿಂಗ್‌ನಲ್ಲಿ 7ನೇ ರ‌್ಯಾಂಕ್ ಗಳಿಸಿದ್ದ. ಅದೇ ರೀತಿ ಮತ್ತೊಬ್ಬ ವಿದ್ಯಾರ್ಥಿ ಎಂ.ವೆಂಕಟ ಪ್ರಣಯ್ 43ನೇ ರ‌್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ದ್ವಿತೀಯ ಟಾಪರ್ ಆಗಿದ್ದಾನೆ. ಇದೇ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಜೆ. ಆದರ್ಶ್ ಎಂಬ ವಿದ್ಯಾರ್ಥಿ 72ನೇ ರ‌್ಯಾಂಕ್ ಹಾಗೂ ವಿಕಲಚೇತನ ಕೋಟಾದ ಅಡಿಯಲ್ಲಿ ಬಿ. ಶಶಾಂಕ್ 2ನೇ ಮತ್ತು ಕೆ. ಸೂರಜ್ ಗುರುಮಠ್ 3ನೇ ರ‌್ಯಾಂಕ್ ಗಳಿಸಿದ್ದಾರೆ.

ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದುದನ್ನು ಗಮನವಿಟ್ಟು ಕೇಳುವ ಜತೆಗೆ ಮನೆಯಲ್ಲಿಯೂ ಅಭ್ಯಾಸ ಮಾಡುತ್ತಿದ್ದೆ. ನನ್ನ ಅಕ್ಕ ಮತ್ತು ಪಾಲಕರು ಕೂಡ ವೈದ್ಯರಾಗಿದ್ದಾರೆ. ನಾನು ಐಐಟಿನಲ್ಲಿ ಇಂಜಿನಿಯರಿಂಗ್ ಮಾಡಬೇಕೆಂಬ ಕನಸು ಇಟ್ಟುಕೊಂಡು ವ್ಯಾಸಂಗ ಮಾಡಿದೆ. ಒಳ್ಳೆಯ ಫಲಿತಾಂಶ ಸಿಕ್ಕಿದೆ. ನಾನು ಕಂಪ್ಯೂಟರ್ ಸೈನ್ಸ್ ತೆಗೆದುಕೊಳ್ಳಬೇಕೆಂದುಕೊಂಡಿದ್ದೇನೆ. | ಉಜ್ವಲ್ ಎಲ್. ಶಂಕರ್, ರಾಜ್ಯದ ಪ್ರಥಮ ಟಾಪರ್

ಬೆಂಗಳೂರಿನ ಅಲೇನ್ ಕರಿಯರ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳಾದ ವಿಹಾನ್ ಲುಹಾರಿವಾಲಾ ಅಖಿಲ ಭಾರತ ಮಟ್ಟದಲ್ಲಿ 75ನೇ ರ‌್ಯಾಂಕ್, ತನಿಷ್ ಎಸ್.ಖುರಾನಾ 85 ಮತ್ತು ಎನ್. ನಂದಾ ಗೋಪಿಕೃಷ್ಣ 88ನೇ ರ‌್ಯಾಂಕ್‌ ಗಳಿಸಿದ್ದಾರೆ. ಶ್ರೀಚೈತನ್ಯ ಎಜುಕೇಷನ್ ಇನ್‌ಸ್ಟಿಟ್ಯೂಷನ್ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ 9 ವಿದ್ಯಾರ್ಥಿಗಳು ಕೂಡ ಹೆಚ್ಚಿನ ಅಂಕ ಗಳಿಸಿದ್ದಾರೆ. ಎಸ್.ಪ್ರಥಮ್-102, ಪಿ.ಧ್ರುವ್ ಶಿವಕಾಂತ್-198, ಪ್ರತ್ಯಕ್ಷ ಜೈನ್-407, ಎಂ.ಲೇಖ್ಯ ರೆಡ್ಡಿ-523, ಸಾದಿತ್ಯ ಕೆ. ಅನಿಲ್- 550, ಎನ್.ಎಚ್.ಮನೋಜ್- 559, ವಿಪುಲ್ ತೇಜ್ವಾನಿ-660, ಕಾರ್ತಿಕ್ ಕಶ್ಯಪ್- 819, ಅಭಿನವ್ ಬಿಟ್ರಾಗುಂಟಾ 965 ಅಂಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net