

ತುಮಕೂರು: ಜೆಡಿಎಸ್ನ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ನಿವಾಸಕ್ಕೆ ಮಂಗಳವಾರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಜೆಡಿಎಸ್ನಿಂದ ಹೊರಬಂದು ಕಾಂಗ್ರೆಸ್ನಲ್ಲಿ ಗುಬ್ಬಿ ಶ್ರೀನಿವಾಸ್ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ನಿವಾಸಕ್ಕೆ ಜೆಡಿಎಸ್ನ ಪ್ರಭಾವಿ ನಾಯಕರಾಗಿರುವ ಸಾ.ರಾ.ಮಹೇಶ್ ಭೇಟಿ ನೀಡಿರುವುದು ಸಹಜವಾಗಿ ಚರ್ಚೆಗೀಡು ಮಾಡಿದೆ.
ವಿಧಾನ ಮಂಡಲ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿರುವ ಸಾ.ರಾ. ಮಹೇಶ್ ಅವರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಿತಿಯ ಸಭೆಗಾಗಿ ತುಮಕೂರಿಗೆ ಆಗಮಿಸಿದ್ದರು. ಈ ವೇಳೆ ಸಮಿತಿ ಸದಸ್ಯರಾದ ಜೆಡಿಎಸ್ ಶಾಸಕ ಅನ್ನದಾನಿ, ಕಾಂಗ್ರೆಸ್ ಎಂಎಲ್ಸಿ ದಿನೇಶ್ ಗೂಳಿಗೌಡ ಇದ್ದರು. ಸಾ.ರಾ.ಮಹೇಶ್ರನ್ನು ಶ್ರೀನಿವಾಸ್ರ ಪತ್ನಿ ಭಾರತಿ ಹಾಗೂ ಪುತ್ರ ದುಷ್ಯಂತ್ ಸ್ವಾಗತಿಸಿದರು. ಕೆಲಕಾಲ ಮಾತುಕತೆ ನಡೆಸಿದರು.