ಬಿಡದಿ ಪುರಸಭೆ ಜೆಡಿಎಸ್​ ವಶ

19-bidadi-2
Published on
ಬಿಡದಿ: ಪ್ರತಿಷ್ಠಿತ ಬಿಡದಿ ಪುರಸಭೆ ಜೆಡಿಎಸ್ ವಶವಾಗಿದೆ. ಅಧ್ಯಕ್ಷರಾಗಿ ಹರಿಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಗೋವಿಂದಪ್ಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಪುರಸಭೆ ಕಚೇರಿಯ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ‌ ಹಾಗೂ ಉಪಾಧ್ಯಕ್ಷಗಾಧಿಯ ಚುನಾವಣೆ ನಿಗದಿಯಾಗಿತ್ತು. ಒಟ್ಟು 23 ಸದಸ್ಯ ಬಲಹುಳ್ಳ ಪುರಸಭೆಯಲ್ಲಿ ಜೆಡಿಎಸ್ 14  ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನ ಹೊಂದಿತ್ತು.  ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ 11 ನೇ ವಾರ್ಡ್ ಸದಸ್ಯ ಹರಿಪ್ರಸಾದ್ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್ ನಿಂದ 21 ನೇ ವಾರ್ಡ್ ಸದಸ್ಯ ರಾಮಚಂದ್ರಯ್ಯ ನಾಮಪತ್ರ ಸಲ್ಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ 3 ನೇ ವಾರ್ಡ್ ಸದಸ್ಯೆ ಮಂಜುಳಾ ಗೋವಿಂದಪ್ಪ ಉಮೇದುವಾರಿಕೆ ಸಲ್ಲಿಸಿದರೆ ಕಾಂಗ್ರೆಸ್ ನಿಂದ 15 ನೇ ವಾರ್ಡ್ ನ ಸದಸ್ಯೆ ಬಿಂದ್ಯಾ ನಾಮಪತ್ರ ಸಲ್ಲಿಸಿದರು. ಅಂತ್ತಿಮವಾಗಿ ಚುನಾವಣೆ ನಡೆದು ಹರಿಪ್ರಸಾದ್ ಅವರಿಗೆ 14 ಸದಸ್ಯರ ಮತ ಹಾಗೂ ಒಂದು ಸಂಸದರ ಮತ ಸೇರಿ 15 ಮತಗಳು ಚಲಾವಣೆಗೊಂಡರೆ ಕಾಂಗ್ರೆಸ್ ನ ರಾಮಚಂದ್ರಯ್ಯ ಅವರಿಗೆ 9  ಸದಸ್ಯರು ಕೈ ಎತ್ತಿದ್ದರು.  ಉಪಾಧ್ಯಕ್ಷ ಸ್ಥಾನದ ಮಂಜುಳಾ ಪರವಾಗಿ  15 ಮತ ಕಾಂಗ್ರೆಸ್ ನ ಬಿಂದ್ಯಾ ಅವರಿಗೆ 9 ಮತಗಳು ಲಭಿಸಿದ್ದವು.
ಚುನಾವಣಾಧಿಕಾರಿಗಳಾಗಿ ರಾಮನಗರ ತಹಶಿಲ್ದಾರ್ ತೇಜಸ್ವಿನಿ ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಜಿ.ರಮೇಶ್ ಕಾರ್ಯನಿರ್ವಹಿಸಿದ್ದರು. ಚುನಾವಣಾ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಡದಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net