

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕದಲ್ಲಿ ಮತ್ತು ನಾಡಿನಲ್ಲಿ ಜಾತ್ಯಾತೀತ ಜನತಾ ದಳ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಲೋಕಸಭೆ, ಜಿಪಂ, ತಾಪಂ ಚುನಾವಣೆಗೆ ಸಜ್ಜುಗೊಳಿಸಲು ಜೆಡಿಎಸ್ ಪುನಶ್ವೇತನ ಪರ್ವ' ಕಾರ್ಯಕರ್ತರಿಗೆ ಟಾನಿಕ್ ನೀಡಿತು. ಹೊಸ ಶಕ್ತಿಯೊಂದಿಗೆ ಜೆಡಿಎಸ್ ಫಿನಿಕ್ಸ್ನಂತೆ ಪುಟಿದೇಳಲು ಶರಣರ ನಾಡು ಕಲಬುರಗಿಯಿಂದಲೇ ಪಕ್ಷದ ನಾಯಕರು ಸೇರಿಕೊಂಡು ಶಕ್ತಿ ಪ್ರದರ್ಶನ ಮಾಡಿ ರಣಕಹಳೆ ಮೊಳಗಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಜೆಡಿಎಸ್ ಪುನಶ್ಚೇತನ ಪರ್ವವನ್ನು ಉದ್ಘಾಟಿಸಿದ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯP್ಷÀರಾದ ಶಾಸಕ ಜಿ.ಟಿ ದೇವೆಗೌಡ, ಕಾರ್ಯಧ್ಯP್ಷÀ ಅಲಕೋಡ್ ಹನುಮಂತಪ್ಪ, ಮಾಜಿ ಸಚಿವರಾದ ಬಂಡೆಪ್ಪ ಖಾಶಂಪುರ, ಡಾ.ಎ.ಬಿ.ಮಾಲಕರಡ್ಡಿ, ವೆಂಕಟರಾವ ನಾಡಗೌಡ, ಸಿ.ಎಸ್.ಪುಟ್ಟರಾಜು, ಮಾಜಿ ಉಪಸಭಾಪತಿ ಎಂ.ಕೃಷ್ಣರೆಡ್ಡಿ, ಶಾಸಕರಾದ ರಾಜುಗೌಡ ದೇವರಹಿಪ್ಪರಗಿ, ಕೆ.ನೇಮಿರಾಜು, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಸುರೇಶಗೌಡ ನೆಲಮಂಗಲ, ಪ್ರಸನ್ನಕುಮಾರ. ಗುರು ಪಾಟೀಲ್ ಶಿರವಾಳ ಮೊದಲಾದವರು ಮಾತನಾಡಿ ಬಿಜೆಪಿ ಜತೆಗಿನ ಮೈತ್ರಿಗೆ ನಾಯಕರ ನಡೆಗೆ ಬೆಂಬಲಿಸಿದರು. ದೇಶಕ್ಕಾಗಿ ಮೋದಿ ಅಗತ್ಯವೆಂದು ಪ್ರತಿಪಾದಿಸಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯವರ ಕಾಲಿಗೆ ಬಿದ್ದು ಬಂದಿz್ದÁರೆ ಎಂದು ಹೇಳಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಬಂಡೆಪ್ಪ ಖಾಶಂಪುರ ತೀವ್ರ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ೨೦೧೮ರಲ್ಲಿ ಯಾರು? ಯಾರ ಕಾಲಿಗೆ ಬಂದು ಬಿದ್ದಿದ್ದರು ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು. ಜೆಡಿಎಸ್ ನಾಯಕರ ಕಾಲಿಗೆ ನಿಮ್ಮ ಪಕ್ಷದರು ಬಿದಿದ್ದರಿಂದಲೇ ಅಂದು ನೀವು ಮಂತ್ರಿಯಾದಿರಿ ಎಂಬುದು ಮರೆತಿರುವಂತಿದೆ. ಈ ರೀತಿ ಮಾತನಾಡುವುದು ಸರಿಯಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಹತಾಶರಾಗಿ ಮಾನಸಿಕವಾಗಿ ಘಾಸಿಗೊಂಡು ಕಾಂಗ್ರೆಸ್ ನಾಯಕರು ಹೀಗೆ ಮಾತನಾಡುತ್ತಿದ್ದಾರೆ ಎಂದು ಕಿಚಾಯಿಸಿದರು.