ಬಿಜೆಪಿ-ಜೆಡಿಎಸ್ ವಿಲೀನ ಚರ್ಚೆ ಹುಟ್ಟುಹಾಕಿದ್ದೇ ಕಾಂಗ್ರೆಸ್ಸಿಗರು: ಜೆಡಿಎಸ್ ಶಾಸಕ ಸುರೇಶ್ ಗೌಡ ಆರೋಪ

mla_suresh JDS
Published on

ಮಂಡ್ಯ : ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಆಗಲಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ಸಿನವರು. ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವುದಕ್ಕೆ ಈ ರೀತಿ ಎಲ್ಲ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಜೆಡಿಎಸ್​ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.

ಬಿಜೆಪಿ ಅಥವಾ ಜೆಡಿಎಸ್​ ಪಕ್ಷದ ನಾಯಕರು ಯಾರೂ ವಿಲೀನ ವಿಚಾರದ ಪ್ರಸ್ತಾಪವನ್ನೇ ಮಾಡಿಲ್ಲ. ಹೀಗಿದ್ದಾಗ್ಯೂ, ಕಾಂಗ್ರೆಸ್ ಪಕ್ಷದವರು ಕಥೆಗಳನ್ನು ಹುಟ್ಟುಹಾಕಿ ಜೆಡಿಎಸ್ ಪಕ್ಷವನ್ನು ಮುಗಿಸುವುದಕ್ಕೆ ಸಂಚು ರೂಪಿಸಿದ್ದಾರೆ. 33 ಶಾಸಕರ ಪೈಕಿ ಇಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಕುಮಾರಸ್ವಾಮಿಯವರ ಜತೆಗೆ ಇದ್ದೇವೆ.

ಇಬ್ಬರು ಶಾಸಕರಿಗೆ ಕೊಂಚ ಅಸಮಾಧಾನವಾಗಿದೆ. ಸಚಿವರಾಗಿದ್ದವರು ಅವರು. ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಅಸಮಾಧಾನಕ್ಕೆ ಪರಿಹಾರ ಅಲ್ಲಿ ಸಿಗಬಹುದು. ಅಸಮಾಧಾನ ಏನು ಎಂಬ ವಿವರ ನಮಗಿಲ್ಲ. ಇನ್ನು ಬಿಜೆಪಿಗೆ ನಾವು ವಿಷಯಾಧಾರಿತ ಬೆಂಬಲವನ್ನು ನೀಡುತ್ತೇವೆ. ಇದು ಪಕ್ಷದ ನಿಲುವು ಎಂದು ಸುರೇಶ್ ಗೌಡ ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net