More

    ಮಕರ ಸಂಕ್ರಮಣದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿವೆ ನಿರೀಕ್ಷಿಸಿ! : ಕುತೂಹಲ ಕೆರಳಿಸಿದೆ ಯತ್ನಾಳರ ಮಾತು

    ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಜನವರಿ ಮಧ್ಯಭಾಗದಲ್ಲಿ ಅಮಿತ್ ಷಾ ಅವರು ಬೆಂಗಳೂರಿಗೆ ಆಗಮಿಸಿದ ವೇಳೆ ಈ ಬಗ್ಗೆ ಒಂದು ನಿರ್ಧಾರವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಈ ನಡುವೆ ವಿಜಯಪುರದಲ್ಲಿ ಇಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಸುದ್ದಿಗಾರರು ಮಾತನಾಡಿಸಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅವರು ಹೇಳಿದ್ದಿಷ್ಟು-

    ಸಚಿವ ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲಾ. ನೀವು ಮಾಧ್ಯಮದವರೇ ಅದನ್ನ ಎಬ್ಬಿಸಿದ್ದೀರಿ, ನೀವು ಯಾವಾಗ್ಯಾವಾಗ ಯಾರ ಪರವಾಗಿ ಹೊಡಿತಿರೋ ಗೊತ್ತಿಲ್ಲ. ಎಲ್ಲವೂ ಗೂಢವಾಗಿದೆ, ಮಕರ ಸಂಕ್ರಮಣದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿವೆ ನಿರೀಕ್ಷಿಸಿ. ಸಂಕ್ರಮಣದ ಬಳಿಕ ಉತ್ತರಾಯಣ ಕಾಲ ಆರಂಭವಾಗಲಿದೆ. ಸೂರ್ಯ ಉತ್ತರ ಪಥದಿಂದ ಬರುತ್ತಾನೆ, ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ.

    ಇದನ್ನೂ ಓದಿ:  ಹೊಸವರ್ಷಕ್ಕೆ ‘ಶೈಕ್ಷಣಿಕ ಹಬ್ಬದ’ಸಿದ್ಧತೆ, ಶಾಲೆ ಪುನರಾರಂಭ ಹಿನ್ನೆಲೆಯಲ್ಲಿ ಗರಿಗೆದರಿದ ಶೈಕ್ಷಣಿಕ ಚಟುವಟಿಕೆ, ತಳಿರು ತೋರಣಗಳಿಂದ ವಿದ್ಯಾರ್ಥಿಗಳಿಗೆ ಸ್ವಾಗತ

    ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನು ಅದರಲ್ಲಿ ಇಲ್ಲ. ದಯವಿಟ್ಟು ಯತ್ನಾಳರ ಹೆಸರು ಇದೆ ಎಂದು ಸುದ್ದಿ ಮಾಡಬೇಡಿ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲು ಮನಸ್ಸಿಲ್ಲ. ಮುಂದೆ ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು, ಆಗಬಾರದು ಅಂತೆಲ್ಲಿದೆ?.

    ಇದನ್ನೂ ಓದಿ: ಮೊದಲು ಕಾಶ್ಮೀರ ವಶಪಡಿಸ್ತೇವೆ, ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಅಂದ್ರು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ​

    ಕೇಂದ್ರ ಹೈಕಮಾಂಡ್ 100ಕ್ಕೆ 100ರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟುದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದಿದ್ದಾರೆ. ರಿಮೋಟ್ ನಿಮ್ಮ ಬಳಿಯೇ(ಮಾಧ್ಯಮಗಳ) ಇವೆ, ಯಾವಾಗ ಯಾರನ್ನ ಹೊಗಳ್ತಿರೋ ಯಾವಾಗ ಯಾರನ್ನ ಮಣ್ಣಲ್ಲಿ ಇಡ್ತಿರೋ ಗೊತ್ತಿಲ್ಲ ಎನ್ನುವ ಮೂಲಕ ಯತ್ನಾಳ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಅರುಣಾಚಲದಲ್ಲಿ ಜೆಡಿಯುಗೆ ಆಘಾತ: ಬಿಜೆಪಿ ಸೇರಿದ್ರು ಆರು ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts