

ಹೊಳೆನರಸೀಪುರ: ತಾಲೂಕಿನ ಜೆಡಿಎಸ್ ಭದ್ರಕೋಟೆ ಹಳೇಕೋಟೆಗೆ ಸೇರಿದ ಹನುಮನಹಳ್ಳಿ, ಬಸವನಾಯಕನಹಳ್ಳಿ, ಮಾಕವಳ್ಳಿ ಗ್ರಾಮಗಳ ನೂರಾರು ಜೆಡಿಎಸ್ ಬೆಂಬಲಿಗರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು.
ಪಟ್ಟಣದ ಕಾಂಗ್ರೆಸ್ ಮುಖಂಡ ಶ್ರೇಯಸ್ ಎಂ.ಪಟೇಲ್ ನಿವಾಸದಲ್ಲಿ ಹನುಮನಹಳ್ಳಿ ಗ್ರಾಮದ ದೇವರಾಜು, ರವಿ, ನಟರಾಜು, ಸುಂದರೇಶ್, ಕಿರಣ್, ರಂಗನಸ್ವಾಮಿ, ಧರಣಿ, ಕೇಶವಮೂರ್ತಿ ಪರಮೇಶ್, ಮನು, ಜೀವನ್ ಗಿರೀಶ್ ರೇವಣ್ಣ, ದಿಲೀಪ್ , ಬಸವನಾಯಕನಹನಹಳ್ಳಿ ಗ್ರಾಮದ ರವಿ, ಮಾಕವಳ್ಳಿ ಗ್ರಾಮದ ದೀಪು, ದೇವರಾಜು, ಮನು, ರವಿ, ಯೋಗೇಶ, ರಘು, ಮಧು, ದಿನೇಶ್ ಸೇರ್ಪಡೆಗೊಂಡರು. ಪಕ್ಷಕ್ಕೆ ಆಗಮಿಸಿದ ಯುವ ಮುಖಂಡರನ್ನು ಶ್ರೇಯಸ್ ಪಟೇಲ್ ಸ್ವಾಗತಿಸಿ ಸಿಹಿ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಲೋಕೇಶ್, ಪುರಸಭೆ ಸದಸ್ಯ ಭೈರಶೆಟ್ಟಿ, ಮಾಜಿ ಸದಸ್ಯ ಎಚ್.ಜೆ.ಕುಮಾರ್, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಉಮೇಶ್, ಎಪಿಎಂಸಿ ಮಾಜಿ ಸದಸ್ಯ ಎಚ್.ಕೆ.ಮಹೇಶ್, ನಾಗರಾಜು, ರಂಗಸ್ವಾಮಿ, ಎಚ್.ಆರ್.ಪ್ರಸನ್ನಕುಮಾರ್, ಬಾಬು ಹಾಜರಿದ್ದರು.